ಹಠಾತ್ ಉಲ್ಟಾ ಹೊಡೆದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

5-68262bbb38485
Published on

ನವದೆಹಲಿ: ಪಹಲ್ಗಾಮ್​ನಲ್ಲಿ ಭಯೋತ್ಪಾದಕರು ನಡೆಸಿದ ಹೇಯ ದಾಳಿ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿದ್ದ ಸಂಘರ್ಷವನ್ನು ತಡೆದಿದ್ದು ತಾವೇ ಎಂದು ಪದೇಪದೇ ಹೇಳಿಕೊಳ್ಳುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಿದ್ದಾರೆ. ‘ನನ್ನಿಂದಾಗಿಯೇ ಭಾರತ ಮತ್ತು ಪಾಕ್ ನಡುವಿನ ಸಂಘರ್ಷ ಅಂತ್ಯಗೊಂಡಿತು ಎಂದು ನಾನು ಹೇಳಿಲ್ಲ. ಆದರೆ ನನ್ನ ಆಡಳಿತ ಅದರಲ್ಲಿ ಮಹತ್ವದ ಪಾತ್ರ ವಹಿಸಿರುವುದಂತೂ ನಿಜ’ ಎಂದು ಟ್ರಂಪ್ ಹೇಳಿದ್ದಾರೆ. ಅಣ್ವಸ್ತ್ರಶಕ್ತ ರಾಷ್ಟ್ರಗಳಾದ ಭಾರತ-ಪಾಕ್ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗಂಭೀರ ಸಂಘರ್ಷದಲ್ಲಿ ತೊಡಗಿದ್ದವು.

ಭಾರತ ನಿರಾಕರಣೆ: ಕದನವಿರಾಮದಲ್ಲಿ ಯಾವುದೇ ವಿದೇಶಿ ಶಕ್ತಿಗಳ ಹಸ್ತಕ್ಷೇಪವಿಲ್ಲ ಎಂದು ಭಾರತ ಸ್ಪಷ್ಟಪಡಿಸಿ ಟ್ರಂಪ್ ಬಡಾಯಿಯನ್ನು ಖಡಕ್ಕಾಗಿ ತಿರಸ್ಕರಿಸಿತ್ತು. ತಕ್ಷಣದಿಂದಲೇ ಎಲ್ಲ ಫೈರಿಂಗ್ ಸ್ಥಗಿತಗೊಳಿಸಲು ಹಾಗೂ ನೆಲ, ವಾಯು ಮತ್ತು ಸಮುದ್ರದಲ್ಲಿ ಎಲ್ಲ ಮಿಲಿಟರಿ ಕಾರ್ಯåಚರಣೆಗಳನ್ನು ನಿಲ್ಲಿಸಲು ಉಭಯ ದೇಶಗಳ ಮಿಲಿಟರಿ ಕಾರ್ಯåಚರಣೆಗಳ ಮಹಾ ನಿರ್ದೇಶಕರು (ಡಿಜಿಎಂಒ) ಸಹಮತಕ್ಕೆ ಬಂದಿದ್ದರು. ಯಾವುದೇ ತೃತೀಯ ಶಕ್ತಿಯ ಪಾತ್ರ ಇದರಲ್ಲಿ ಇರಲಿಲ್ಲ ಎಂದು ಭಾರತ ಸತತವಾಗಿ ಹೇಳುತ್ತಲೇ ಬಂದಿದೆ. ಕದನವಿರಾಮ ಮಾತುಕತೆಯ ಭಾಗವಾಗಿ ವಾಣಿಜ್ಯ ಉತ್ತೇಜನದ ವಿಚಾರ ಪ್ರಸ್ತಾಪವಾಗಿತ್ತು ಎಂಬ ವರದಿಗಳನ್ನು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಳ್ಳಿ ಹಾಕಿದ್ದರು. ಏನಿದ್ದರೂ ಭಾರತ ಮತ್ತು ಪಾಕ್ ನಡುವಣ ಮಿಲಿಟರಿ ಪರಿಸ್ಥಿತಿ ಬಗ್ಗೆ ಭಾರತ ಮತ್ತು ಅಮೆರಿಕ ನಾಯಕರ ನಡುವಿನ ಮಾತುಕತೆಗಳಲ್ಲಿ ರ್ಚಚಿಸಲಾಗಿದೆ ಎಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net