

ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್ ಜೂನ್ 14ರಂದು ಸಭೆ ಕರೆದಿದೆ.
ಈ ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದ್ದು, ಬೂತ್ ಮಟ್ಟದಿಂದ ಸಂಘಟನೆ ಸದೃಢಗೊಳಿಸಲು ಹಾಗೂ ಮತದಾರರನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯುವ ಉದ್ದೇಶದಿಂದ, ಅದರಲ್ಲೂ ಯುವಕರು, ಮಹಿಳೆಯರಲ್ಲಿ ಪಕ್ಷದ ಪರ ಒಲವು ಮೂಡಿಸುವ ಸಲುವಾಗಿ ವಿನೂತನ ಕಾರ್ಯಕ್ರಮ ರೂಪಿಸಲು ನಿರ್ಧರಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಹೊಸ ಯೋಜನೆಯ ರೂಪುರೇಷೆ ಬಗ್ಗೆ ಚರ್ಚೆ ನಡೆಸಲು ಸಮಾಲೋಚನೆ ನಡೆಸಲಾಗುತ್ತದೆ. ಮುಖ್ಯವಾಗಿ ಪ್ರತಿ ಬೂತ್‌ನಲ್ಲಿ 50 ಸದಸ್ಯರ ಕಾಂಗ್ರೆಸ್ ಕುಟುಂಬವನ್ನು ರಚಿಸಬೇಕೆಂಬ ಚಿಂತನೆ ಇದ್ದು, ಈ ಸಭೆಯಲ್ಲಿ ಸ್ಪಷ್ಟ ರೂಪ ಪಡೆದುಕೊಳ್ಳಲಿದೆ.