ಒಣ ಗಾಂಜಾ ಸಾಗಿಸುತ್ತಿದ್ದ ಮೂವರ ಬಂಧನ

IMG-20250627-WA0169
ಕೆ.ಆರ್.ಪೇಟೆ ತಾಲೂಕಿನ ಚಿಕ್ಕೋನಹಳ್ಳಿ ಬಳಿಯ ಕೆ.ಎಚ್.ಬಿ ಬಡಾವಣೆ ಮುಂಭಾಗ ಚನ್ನರಾಯಪಟ್ಟಣ-ಮೈಸೂರು ಮುಖ್ಯರಸ್ತೆಯಲ್ಲಿ ಒಣ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.
Published on

ಕೆ.ಆರ್.ಪೇಟೆ: ತಾಲೂಕಿನ ಚಿಕ್ಕೋನಹಳ್ಳಿ ಬಳಿಯ ಕೆ.ಎಚ್.ಬಿ ಬಡಾವಣೆ ಮುಂಭಾಗ ಚನ್ನರಾಯಪಟ್ಟಣ-ಮೈಸೂರು ಮುಖ್ಯರಸ್ತೆಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

ಪಾಂಡವಪುರದ ಉಮ್ರಾಜ್ ಬೇಗ್ ಬಿನ್ ಸೈಫುಲ್ಲಾ, ಜಬಿವುಲ್ಲಾ ಅಬ್ದುಲ್ ರಹೀಮ್, ಚನ್ನರಾಯಪಟ್ಟಣದ ಸೈಯದ್ ಹುಸೇನ್ ಮೂವರು ಬಂಧಿತರು. ಪಾಂಡವಪುರದ ಅಬಕಾರಿ ಉಪ ಅಧೀಕ್ಷಕರಾದ ಪಾಂಡವಪುರ ವಿ.ಬಿ.ರಾಧಾಮಣಿ ಅವರ ನೇತೃತ್ವದಲ್ಲಿ ಪಾಂಡವಪುರ ವಿಭಾಗದ ಅಬಕಾರಿ ನಿರೀಕ್ಷಕ ವೈ.ಜೆ.ಪ್ರಫುಲ್ಲಚಂದ್ರ ಹಾಗೂ ಕೆ.ಆರ್.ಪೇಟೆ ಅಬಕಾರಿ ನಿರೀಕ್ಷಕ ದೀಪಕ್ ತಂಡ ದಾಳಿ ಮಾಡಿ 5 ಕೆಜಿಯ ಸುಮಾರು 3.5 ಲಕ್ಷ ರೂ. ಮೌಲ್ಯದ ಒಣ ಗಾಜಾವನ್ನು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ವೃತ್ತ ನಿರೀಕ್ಷಕ ದೀಪಕ್ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅಬಕಾರಿ ಸಿಬ್ಬಂದಿ ಎಚ್.ವಿ.ರಾಮು, ಪಿ.ಜಿ.ದಿಲೀಪ್‌ಕುಮಾರ್, ಎನ್.ದಿನೇಶ್, ಜಿ.ಎನ್.ಸಂದೀಪ್, ಮುಖ್ಯ ಪೇದೆ ವೈರಮುಡಿ, ಎಂ.ಜಿ.ನಾಗರಾಜು, ಸಂದೀಪ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net