

ಬೆಂಗಳೂರು: ಗೃಹಜ್ಯೋತಿ ಯೋಜನೆ ಉದ್ಘಾಟನೆ ಕಾರ್ಯಕ್ರಮದ ಮೂಲಕ ದೇಶದ ಗಮನ ಸೆಳೆಯಲು ಬಯಸಿರುವ ಸರ್ಕಾರ ಭರದ ತಯಾರಿ ನಡೆಸುತ್ತಿದೆ.
ಮಂಗಳವಾರ ಮುಖ್ಯಮಂತ್ರಿಯವರು ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರ ಜತೆ ವಿಡಿಯೊ ಸಂವಾದ ನಡೆಸಿ, ಕ್ಷೇತ್ರವಾರು ಗೃಹಲಕ್ಷ್ಮೀ ಉದ್ಘಾಟನಾ ಕಾರ್ಯಕ್ರಮ ನಡೆಸುವುದು, ಸರ್ಕಾರದ ಗ್ಯಾರಂಟಿ ಯೋಜನೆಗ ಕುರಿತು ಪ್ರಚಾರ ನಡೆಸಲು ಸೂಚನೆ ನೀಡಿದರು.
ಆಗಸ್ಟ್ 20ರಂದು ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಯೋಜನೆ ರಾಜ್ಯಮಟ್ಟದ ಉದ್ಘಾಟನಾ ಕಾರ್ಯಕ್ರಮ ಬೆಳಗಾವಿಯಲ್ಲಿ ನಡೆಯುತ್ತದೆ.