ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ

kasapa D.Manjunath
Published on

ಶಿವಮೊಗ್ಗ: ನಗರದ ಸಾಹಿತ್ಯ ಗ್ರಾಮದಲ್ಲಿ 2025ರ ಫೆ.6 ಮತ್ತು 7ರಂದು ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಎರಡು ದಿನಗಳ ಸಮ್ಮೇಳನಕ್ಕೆ ನಾಲ್ಕು ಸಾವಿರ ಸಾಹಿತ್ಯಾಸಕ್ತರು, ಕಸಾಪ ಸದಸ್ಯರು, ಕನ್ನಡ ಮನಸ್ಸುಗಳನ್ನು ಪ್ರತಿನಿಧಿಗಳನ್ನಾಗಿ ನೋಂದಣಿ ಮಾಡಲಾಗುವುದು ಎಂದು ಜಿಲ್ಲಾಧ್ಯಕ್ಷ ಡಿ.ಮಂಜುನಾಥ ತಿಳಿಸಿದ್ದಾರೆ.

ತಾಲೂಕು ಸಮಿತಿಗಳು, ಹೋಬಳಿ ಸಮಿತಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ವಾಸವಿರುವ ಸಾಹಿತ್ಯ ಕ್ಷೇತ್ರದ ಗಣ್ಯರು, ಹೊಸತಲೆಮಾರಿನ ಸಾಹಿತ್ಯ ಪ್ರತಿಭೆಗಳ, ಸಾಧಕರ ಮಾಹಿತಿ ಸಂಗ್ರಹಿಸಿ ಜಿಲ್ಲಾ ಸಮಿತಿ ಸಭೆಗೆ ಬರುವಾಗ ತರುವಂತೆ ತಿಳಿಸಲಾಗಿದೆ.

ಸಮ್ಮೇಳನದಲ್ಲಿ ಯಾವ ಯಾವ ವಿಚಾರಗಳ ಕುರಿತು ಗೋಷ್ಠಿ ನಡೆಸಬೇಕು ಎಂಬುದರ ಚರ್ಚೆ ನಡೆಯಿತು. ಸಮ್ಮೇಳನ ಅಧ್ಯಕ್ಷರ ಆಯ್ಕೆ ಸೇರಿ ಹಲವು ವಿಚಾರಗಳನ್ನು ಚರ್ಚೆ ಮಾಡಲು ಡಿ.28ರ ಸಂಜೆ ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗುವುದು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net