ಪ್ರಧಾನಿ ಮೋದಿ ಯುಕೆ ಭೇಟಿಗೆ ಸಿದ್ಧತೆ: ಖಲಿಸ್ತಾನಿ ಉಗ್ರವಾದದ ಬಗ್ಗೆ ಚರ್ಚೆ!: Vikram Mishri

modi and Keirstormer,
Published on

Vikram Mishri: ಪ್ರಧಾನಿ ನರೇದ್ರ ಮೋದಿ ಜು.23ರಂದು 4ನೇ ಬಾರಿಗೆ ಯುಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಭೇಟಿಯಲ್ಲಿ ಬಹು ನಿರೀಕ್ಷೀತ ಮುಕ್ತ ವ್ಯಾಪಾರ ಒಪ್ಪಂದ(FTI) ವನ್ನು ಅಂತಿಮಗೊಳ್ಳುವುದರೊಂದಿಗೆ ಭಾರತ- ಯುಕೆ ಸಂಬಂಧಗಳಿಗೆ ಹೊಸ ಶಕ್ತಿ ಬರಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್​ಮಿಶ್ರಿ ಮಂಗಳವಾರ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಧಾನಿಯವರು ನಾಳೆ (ಜುಲೈ 23) ರಂದು ಯುನೈಟೆಡ್​ ಕಿಂಗ್​ಡಮ್​ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಯುಕೆ ಪ್ರಧಾನ ಮಂತ್ರಿ ಕೀರ್​ಸ್ಟಾರ್ಮರ್ ಜತೆಗೆ ಚರ್ಚೆ ನಡೆಸಲಿದ್ದು, ಕಿಂಗ್​ ಚಾರ್ಲ್ಸ್ III ಅವರನ್ನು ಸಹ ಭೇಟಿ ಮಾಡಲಿದ್ದಾರೆ. ಭಾರತ ಹಾಗೂ ಯುಕೆ ಎರೆಡು ದೇಶಗಳ ವ್ಯಾಪಾರ ನಾಯಕರೊಂದಿಗೆ ಸಂವಾದವನ್ನು ಆಯೋಜಿಸಲಾಗಿದೆ ಎಂದು ಈ ಪ್ರವಾಸದ ಬಗ್ಗೆ ​ಮಿಶ್ರಿ ಹೇಳಿದರು.

"ನಾವು FTA ಗಾಗಿ ಕಾನೂನು ಪರಿಶೀಲನೆಗೆ ಕೆಲಸಗಳನ್ನು ಮಾಡುತ್ತಿದ್ದೇವೆ. ಯುಕೆ ಭಾರತದಲ್ಲಿ 6ನೇ ಅತಿದೊಡ್ಡ ಹೂಡಿಕೆದಾರರಾಗಿದ್ದು, $36 ಬಿಲಿಯನ್ ಹೂಡಿಕೆಯನ್ನು ಹೊಂದಿದೆ. ಭಾರತವು ಸಹ ಯುಕೆಯಲ್ಲಿ ಪ್ರಮುಖ ಹೂಡಿಕೆದಾರನಾಗಿದ್ದು, ಸುಮಾರು $20 ಬಿಲಿಯನ್ ಎಫ್‌ಡಿಐ ಹೊಂದಿದೆ" ಎಂದು ಮಿಶ್ರಿ ತಿಳಿಸಿದ್ದಾರೆ.

ಯುಕೆಯಲ್ಲಿ ಮಹತ್ವದ ಚರ್ಚೆ!

ವಿದೇಶಾಂಗ ಸಚಿವಾಲಯದ ಪ್ರಕಾರ, ಪ್ರಧಾನಿ ಮೋದಿ ಅವರು ಭಾರತ-ಯುಕೆ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯ ಕುರಿತು ತಮ್ಮ ಯುಕೆ ಪ್ರವಾಸದಲ್ಲಿ ವ್ಯಾಪಕ ಚರ್ಚೆಗಳನ್ನು ನಡೆಸಲಿದ್ದಾರೆ. "ಖಲಿಸ್ತಾನಿ ಉಗ್ರಗಾಮಿಗಳ ಉಪಸ್ಥಿತಿ. ನಾವು ಯುಕೆಯಲ್ಲಿರುವ ನಮ್ಮ ಪಾಲುದಾರರ ಗಮನಕ್ಕೆ ತಂದಿದ್ದೇವೆ. ಇದು ನಮ್ಮ ಪಾಲುದಾರರಿಗೂ ಕಳವಳಕಾರಿ ವಿಷಯವಾಗಿರಬೇಕು" ಎಂದು ಮಿಶ್ರಿ ಹೇಳಿದರು.

ಕಳೆದ ಒಂದು ವರ್ಷದಲ್ಲಿ ಮೋದಿ ಅವರು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರನ್ನು ಎರಡು ಬಾರಿ ಭೇಟಿ ಮಾಡಿದ್ದಾರೆ. 2024ರ ನವೆಂಬರ್‌ನಲ್ಲಿ ಬ್ರೆಜಿಲ್‌ನಲ್ಲಿ ನಡೆದ ಜಿ.20 ಶೃಂಗಸಭೆಯ ಸಂದರ್ಭದಲ್ಲಿ ಮತ್ತು 2025ರ ಜೂನ್‌ನಲ್ಲಿ ನಡೆದ ಜಿ 7 ಶೃಂಗಸಭೆಯ ಸಂದರ್ಭದಲ್ಲಿ ಭೇಟಿಯಾಗಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net