Online ಗೇಮ್​ಗಳ ನಿಯಂತ್ರಣಕ್ಕೆ ಕೇಂದ್ರ ಸಚಿವರಿಗೆ ಪತ್ರ ಬರೆದ ಸಿಎಂ ಫಡ್ನವೀಸ್

untitled-design-9-687f7f5952774
Published on

Online : ರಾಜ್ಯದಲ್ಲಿ ಆನ್​ಲೈನ್​ ​ ಬೆಟ್ಟಿಂಗ್​ ಗೇಮ್​ಗಳು ಹೆಚ್ಚುತ್ತಿರುವ ಹಿನ್ನಲೆ, ಮಹಾರಾಷ್ಟ್ರದಲ್ಲಿ ಸಂಪೂರ್ಣ ಆನ್​ಲೈನ್​ ಗೇಮ್ ನಿಷೇಧಿಸಬೇಕೆಂದು ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ .

ಪತ್ರದಲ್ಲೇನಿದೆ..?

ಬೆಟ್ಟಿಂಗ್​ ಗೇಮ್​ಗಳಿಂದ ಆರ್ಥಿಕ ನಾಶ, ಅಪರಾಧ, ಆತ್ಮಹತ್ಯೆಗಳು ಸೇರಿ ಇನ್ನಿತರ ಆಕ್ರಮಗಳ ಸಂಖ್ಯೆ ಹೆಚ್ಚಾಗಿದೆ. ಈ ಹಾನಿಯನ್ನು ತಡೆಯಲು ಐಟಿ ನಿಯಮಗಳು ಸಾಕಾಗುವುದಿಲ್ಲ. ಹೀಗಾಗಿ, ಮಹಾರಾಷ್ಟ್ರದಲ್ಲಿ ಆನ್​ಲೈನ್​ ಗೇಮ್​ಗಳು ಬ್ಯಾನ್​ ಮಾಡಬೇಕೆಂದು ಕೇಂದ್ರ ಐಟಿ ಸಚಿವೆ ಅಶ್ವಿನಿ ವೈಷ್ಣವ್​ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಿಷೇಧದ ಬಗ್ಗೆ ಫಡ್ನವೀಸ್​ ಹೇಳಿದ್ದೇನು?

''ಆನ್​ಲೈನ್​ ಗೇಮ್​​ ನಿಯಂತ್ರಿಸಲು ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಸಿಎಂ ದೇವೆಂದ್ರ ಫಡ್ನವೀಸ್​ ವಿಧಾನ ಸಭೆಯಲ್ಲಿ ಚರ್ಚೆಮಾಡಿದ್ದಾರೆ. ಈ ವೇಳೆ ಆನ್​ಲೈನ್​ ಗೇಮಿಂಗ್​ ಭಾರತದ ಹೊರಗಿನ ವ್ಯಾಪ್ತಿಯನ್ನು ಪಡೆದಿರುವುದರಿಂದ ಕೇಂದ್ರವು ಈ ಗೇಮ್​ಗಳ ಮೇಲೆ ಹೆಚ್ಚಿನ ನ್ಯಾಯವ್ಯಾಪ್ತಿಯನ್ನು ಪಡೆದಿರುತ್ತದೆ. ಹಾಗಾಗಿ, ಇಂತಹ ಬೆದರಿಕೆಗಳನ್ನು ಎದುರಿಸಲು ಕೇಂದ್ರ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಲು ಬದ್ಧರಾಗಿದ್ದೇವೆ'' ಎಂದು ತಿಳಿಸಿದರು.

ಇತ್ತೀಚಿಗೆ ಮುಂಬೈನಲ್ಲಿ ಉದ್ಯಮಿಯೊಬ್ಬರು ಆನ್​ಲೈನ್​ ಬೆಟ್ಟಿಂಗ್​ನಿಂದ 2.74 ಕೋಟಿ ರೂ. ಕಳೆದುಕೊಂಡಿರುವ ಬಗ್ಗೆ ಭಾರೀ ಸುದ್ದಿಯಾಗಿತ್ತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net