451 ಬಾರ್ ಪರವಾನಗಿಗಳ ಇ-ಹರಾಜಿಗೆ ಸಿದ್ಧತೆ: ಅಬಕಾರಿ ಇಲಾಖೆಯಿಂದ 2ನೇ ಬಾರಿ ಪ್ರಕ್ರಿಯೆ- E-auction of Bar License

ಹರಾಜಿನಲ್ಲಿ 579 ಲೈಸೆನ್ಸ್‌ಗಳ ಪೈಕಿ 128 ಲೈಸೆನ್ಸ್ ಮಾತ್ರ ಹರಾಜಾಗಿದ್ದವು. ಉಳಿದ 451 ಲೈಸೆನ್ಸ್‌ಗಳ ಖರೀದಿಗೆ ಬಿಡ್‌ದಾರರು ನಿರಾಸಕ್ತಿ ತೋರಿದ್ದರು. ಆದ್ದರಿಂದ, ಲೈಸೆನ್ಸ್ ಮಾರಾಟದಿಂದ 700 ಕೋಟಿ ರೂ. ಆದಾಯದ ಗುರಿ ಇಟ್ಟುಕೊಂಡಿದ್ದ ಇಲಾಖೆಗೆ ಭಾರಿ ನಿರಾಸೆಯಾಗಿತ್ತು. ಉಳಿದ ಲೈಸೆನ್ಸ್‌ಗಳನ್ನು ಮುಂದಿನ 5 ವರ್ಷಗಳ ಅವಧಿಗೆ ಹರಾಜು ಮೂಲಕ ಹಂಚಿಕೆಗೆ ಇಲಾಖೆ ಮತ್ತೆ ಪ್ರಕ್ರಿಯೆ ಶುರುಮಾಡಿದೆ.
451 ಬಾರ್ ಪರವಾನಗಿಗಳ ಇ-ಹರಾಜಿಗೆ ಸಿದ್ಧತೆ
ಅಬಕಾರಿ ಇಲಾಖೆ
Published on: 

ಬೆಂಗಳೂರು: (E-auction of Bar License) ಜುಲೈ ತಿಂಗಳಿನಲ್ಲಿ ನಡೆದ ಇ-ಹರಾಜಿನಲ್ಲಿ ಹಂಚಿಕೆಯಾಗದೆ ಬಾಕಿ ಉಳಿದಿರುವ ಮದ್ಯದಂಗಡಿ ಲೈಸೆನ್ಸ್‌ಗಳನ್ನು 2ನೇ ಬಾರಿಗೆ ಆನ್‌ಲೈನ್‌ನಲ್ಲಿ ಹರಾಜು ಹಾಕಲು ಅಬಕಾರಿ ಇಲಾಖೆ ಸಿದ್ಧತೆ ನಡೆಸಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜು.24ರಿಂದ 31ರವರೆಗೆ 483 ವೈನ್‌ಶಾಪ್ (ಸಿಎಲ್-2ಎ) ಮತ್ತು 96 ಬಾರ್ ಆ್ಯಂಡ್ ರೆಸ್ಟೋರೆಂಟ್(ಸಿಎಲ್9-ಎ) ಸೇರಿ 579 ಬಾರ್ ಲೈಸೆನ್ಸ್‌ಗಳನ್ನು ಹಂಚಿಕೆ ಮಾಡಲು ಇಲಾಖೆ, ಆನ್‌ಲೈನ್‌ನಲ್ಲಿ ಇ-ಹರಾಜು ಪ್ರಕ್ರಿಯೆ ನಡೆಸಿತ್ತು.

ಹರಾಜಿನಲ್ಲಿ 579 ಲೈಸೆನ್ಸ್‌ಗಳ ಪೈಕಿ 128 ಲೈಸೆನ್ಸ್ ಮಾತ್ರ ಹರಾಜಾಗಿದ್ದವು. ಉಳಿದ 451 ಲೈಸೆನ್ಸ್‌ಗಳ ಖರೀದಿಗೆ ಬಿಡ್‌ದಾರರು ನಿರಾಸಕ್ತಿ ತೋರಿದ್ದರು. ಆದ್ದರಿಂದ, ಲೈಸೆನ್ಸ್ ಮಾರಾಟದಿಂದ 700 ಕೋಟಿ ರೂ. ಆದಾಯದ ಗುರಿ ಇಟ್ಟುಕೊಂಡಿದ್ದ ಇಲಾಖೆಗೆ ಭಾರಿ ನಿರಾಸೆಯಾಗಿತ್ತು. ಉಳಿದ ಲೈಸೆನ್ಸ್‌ಗಳನ್ನು ಮುಂದಿನ 5 ವರ್ಷಗಳ ಅವಧಿಗೆ ಹರಾಜು ಮೂಲಕ ಹಂಚಿಕೆಗೆ ಇಲಾಖೆ ಮತ್ತೆ ಪ್ರಕ್ರಿಯೆ ಶುರುಮಾಡಿದೆ.

Also Read
ಅಬಕಾರಿ ಕೌನ್ಸೆಲಿಂಗ್ ವರ್ಗಾವಣೆಗೆ ಇನ್ನೂ ಸಿಕ್ಕಿಲ್ಲ ಅನುಮತಿ : 5 ತಿಂಗಳಾದರೂ ಒಪ್ಪಿಗೆ ಕೊಡದ ಸರ್ಕಾರ - No permission yet for Excise counseling- transfers
451 ಬಾರ್ ಪರವಾನಗಿಗಳ ಇ-ಹರಾಜಿಗೆ ಸಿದ್ಧತೆ

ಬೆಂಗಳೂರಲ್ಲೇ ಅಧಿಕ:

ಬೆಂಗಳೂರಲ್ಲಿ 182, ದಕ್ಷಿಣ ಕನ್ನಡ 30, ತುಮಕೂರು 24, ಧಾರವಾಡ 19, ಮಂಡ್ಯ 15, ಕೋಲಾರ 15, ಕಲಬುರಗಿ 15, ಶಿವಮೊಗ್ಗ 15, ಮೈಸೂರು ಗ್ರಾಮಾಂತರ 14, ಹಾವೇರಿ 14, ಉತ್ತರ ಕನ್ನಡ 14, ಹಾಸನ 13, ಮೈಸೂರು ನಗರ 13, ಚಿಕ್ಕಮಗಳೂರು 12, ದಾವಣಗೆರೆ 12, ಬಳ್ಳಾರಿ 12, ಚಿತ್ರದುರ್ಗ 12, ಚಿಕ್ಕಬಳ್ಳಾಪುರ 11, ಬೆಂ.ಗ್ರಾಮಾಂತರ 11, ಬೀದರ್ 11, ಬೆಳಗಾವಿ ದಕ್ಷಿಣ 11, ಬೆಳಗಾವಿ ಉತ್ತರ 10, ವಿಜಯನಗರ 10, ರಾಯಚೂರು 9, ಕೊಡಗು 9, ಬಾಗಲಕೋಟೆ 8, ವಿಜಯಪುರ 8, ಗದಗ 8, ಉಡುಪಿ 8, ಚಾಮರಾಜನಗರ 7, ಯಾದಗಿರಿ 6 ಮತ್ತು ಕೊಪ್ಪಳ ಜಿಲ್ಲೆಯಲ್ಲಿ 6 ಲೈಸೆನ್ಸ್‌ಗಳು ಹರಾಜಿಗೆ ಸಿದ್ಧವಾಗಿವೆ. ಪರವಾನಗಿಯ ಮೂಲ ಬೆಲೆ 1 ಕೋಟಿ ರೂ.ನಿಂದ 1.5 ಕೋಟಿ ರೂ.ವರೆಗೆ ಇದೆ. ಒಂದೊಂದು ಪಾಲಿಕೆಯಲ್ಲಿ ಒಂದೊಂದು ಮೂಲ ಬೆಲೆ ನಿಗದಿಪಡಿಸಲಾಗಿದೆ.