ಪ್ರೇಮ ವೈಲ್ಯ ಯುವಕ ಆತ್ಮಹತ್ಯೆಗೆ ಶರಣು

sucide
Published on

ಬೆಂಗಳೂರು: ಪ್ರೀತಿಸಿದ ಹುಡುಗಿ ದೂರವಾಗಿದಕ್ಕೆ ಮನನೊಂದು ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲಿಂಗರಾಜಪುರದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.

ಖಾಸಗಿ ಕಂಪನಿಯ ಉದ್ಯೋಗಿ ಸತೀಶ್ ಕುಮಾರ್(೨೫) ಆತ್ಮಹತ್ಯೆಗೆ ಶರಣಾದವನು. ಸತೀಶ್ ಕುಮಾರ್ ಅವರ ತಾಯಿ ಸಂಗೀತಾ ಅವರು, ಗುರುವಾರ ರಾತ್ರಿ ಸುಮಾರು ೧೦.೩೦ ಕ್ಕೆ ಆತನ ಕೊಠಡಿಗೆ ಹೋಗಿ ನೋಡಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸತೀಶ್, ಕಾಮರ್ಸ್‌ನಲ್ಲಿ ಪದವಿ ಓದುತ್ತಿದ್ದಾಗ ತನ್ನ ಸಹಪಾಠಿ ಯುವತಿಯನ್ನು ಪ್ರೀತಿಸುತ್ತಿದ್ದ. ಡಿಗ್ರಿ ಮುಗಿದ ನಂತರ ಸತೀಶ್ ಹಾಗೂ ಯುವತಿ ಬೇರೆ ಬೇರೆ ಕೆಲಸಗಳಿಗೆ ಸೇರಿದ್ದರು. ಆದರೆ ಪರಸ್ಪರ ಸಂಪರ್ಕದಲ್ಲಿದ್ದರು. ಬಳಿಕ ಕಳೆದ ಎರಡು ವರ್ಷಗಳಿಂದ ಇಬ್ಬರು ಬೆಳ್ಳಂದೂರಿನ ಸ್ಟಾಟ್ ಅಪ್ ಸ್‌ಟಾವೇರ್ ಸಂಸ್ಥೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಅಲ್ಲಿಂದ ಅವರ ನಡುವೆ ಭಿನ್ನಾಭಿಪ್ರಾಯ ಬಂದಿತ್ತು. ಕಳೆದ ಒಂದು ವರ್ಷದಿಂದ ಯುವತಿ ಸತೀಶ್‌ನಿಂದ ದೂರವಾಗಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸತೀಶ್ ವಿರುದ್ಧವೇ ದೂರು ನೀಡಿದ್ದಳು:

ಸುಮಾರು ನಾಲ್ಕು ತಿಂಗಳ ಹಿಂದೆ ಸತೀಶ್ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಯುವತಿ ಜೆ.ಬಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಈ ಸಂಬಂಧ ಗಂಭೀರವಲ್ಲದ ಪ್ರಕರಣ (ಎನ್‌ಸಿಆರ್) ದಾಖಲಿಸಿಕೊಂಡಿದ್ದ ಪೊಲೀಸರು ಭವಿಷ್ಯದಲ್ಲಿ ಆಕೆಗೆ ತೊಂದರೆ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದರು. ಈ ಮಧ್ಯೆ ಹೊಸ ವರ್ಷಕ್ಕೆ ಆಕೆಗೆ ಶುಭಕೋರಲು ಆಕೆಗೆ ಕರೆ ಮಾಡಿದ್ದು, ಅದಕ್ಕೆ ಆಕೆ ಪ್ರತಿಕ್ರಿಯಿಸಲಿಲ್ಲ. ಇದರಿಂದ ಮನನೊಂದ ಆತ ತನ್ನ ಕೊಠಡಿಯಲ್ಲಿನ ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದರೆ ಘಟನಾ ಸ್ಥಳದಲ್ಲಿ ಮತ್ತು ಮೊಬೈಲ್‌ನಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಮೃತನಿಗೆ ತಂದೆ ಇರಲಿಲ್ಲ. ತಾಯಿ ಮತ್ತು ಇಬ್ಬರು ಸಹೋದರಿಯರು ಇದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net