

ಶಿವಮೊಗ್ಗ: ತಾಲೂಕಿನ ಮತ್ತೊಡು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ವತಿಯಿಂದ ಮತ್ತೋಡು ಮತ್ತು ಸುತ್ತಮುತ್ತಲ ಗ್ರಾಮದ ಗರ್ಭಿಣಿಯರಿಗೆ ಸೀಮಂತ ಏರ್ಪಡಿಸಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ವಿದ್ಯಾ, ಪೋಷಣ್ ಅಭಿಯಾನದ ಮಹತ್ವ ವಿವರಿಸಿದರು. ಬದಲಾದ ಕಾಲದಲ್ಲಿ ಕೂಡು ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಹಿಳೆಯರಿಗೆ ಕೆಲಸದ ಒತ್ತಡವೂ ಹೆಚ್ಚಾಗುತ್ತಿದೆ. ಗರ್ಭಿಣಿಯರು ತಮ್ಮನ್ನು ತಾವು ಸರಿಯಾಗಿ ನಿರ್ವಹಣೆ ಮಾಡಿಕೊಳ್ಳಲಾಗದ ಸ್ಥಿತಿ ಇದೆ. ಆಕೆ ಹೆಚ್ಚು ಸಂತೋಷವಾಗಿರಬೇಕಾದ ಸಂದರ್ಭದಲ್ಲಿಯೇ ಆಕೆ ಹೆಚ್ಚು ಒತ್ತಡಕ್ಕೆ ಸಿಲುಕುತ್ತಿದ್ದಾಳೆ ಎಂದು ಹೇಳಿದರು.
ಅಬ್ಬಲಗೆರೆ ಗ್ರಾಪಂ ಸದಸ್ಯ ಕೆ.ಹರ್ಷ ಭೋವಿ ಅಧ್ಯಕ್ಷತೆ ವಹಿಸಿದ್ದರು. ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಕೀರ್ತನಾ, ಮತ್ತೋಡು ಗ್ರಾಪಂ ಸದಸ್ಯೆ ಭಾಗ್ಯಾ ಹೊಸೆಟ್ಟಿ, ಶಿಕ್ಷಕ ಮಂಜುನಾಥ್ ಇತರರಿದ್ದರು.