ತುಂಬು ಗರ್ಭಿಣಿಯನ್ನು ಮಂಚಕ್ಕೆ ಕಟ್ಟಿ ಬೆಂಕಿ ಹಚ್ಚಿದ; ಪತ್ನಿಯ ನರಳಾಟ ನೋಡಿ ಪತಿ ಎಸ್ಕೇಪ್

Pregnant With Twins
Published on

ನವದೆಹಲಿ: ಶುಲ್ಲಕ ಕಾರಣಕ್ಕೆ ಪತಿ-ಪತ್ನಿಯ ನಡುವೆ ಜಗಳ ನಡೆದಿದ್ದು, ಸಿಟ್ಟಿಗೆದ್ದು ಪತ್ನಿಯನ್ನು ಮಂಚಕ್ಕೆ ಕಟ್ಟಿ ಬೆಂಕಿ ಹಚ್ಚಿ ಕೊಂದಿದ್ದಾನೆ. ಈ ಘಟನೆ ಪಂಜಾಬ್‌ನ ಅಮೃತಸರದಲ್ಲಿ ನಡೆದಿದೆ.

ಮೃತ ಮಹಿಳೆಯ ಹೆಸರು ಪಿಂಕಿ (23) ಎಂದು ಹೇಳಲಾಗಿದ್ದು, ಆರೋಪಿ ಪತಿಯ ಹೆಸರು ಸುಖದೇವ್. ಅಮೃತಸರ ಸಮೀಪದ ಬುಲ್ಲೇನಂಗಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಡೆದಿದ್ದೇನು?: ಶುಕ್ರವಾರ ಇಬ್ಬರ ನಡುವೆ ಮತ್ತೆ ತೀವ್ರ ವಾಗ್ವಾದ ನಡೆದಿದ್ದು, ಕೋಪಗೊಂಡ ಪತಿ ಪತ್ನಿಯನ್ನು ಮಂಚಕ್ಕೆ ಕಟ್ಟಿ ಬೆಂಕಿ ಹಚ್ಚಿದ್ದಾನೆ. 23 ವರ್ಷದ ಮಹಿಳೆ 6 ತಿಂಗಳ ಗರ್ಭಿಣಿಯಾಗಿದ್ದಳು. ಸುಖದೇವ್ ಮತ್ತು ಪಿಂಕಿ ಸಂಬಂಧ ಹಳಸಿತ್ತು ಮತ್ತು ಪರಸ್ಪರ ಜಗಳವಾಡುತ್ತಿದ್ದರು. ಯಾವುದೋ ಸಣ್ಣ ವಿಚಾರಕ್ಕೆ ದಂಪತಿ ನಡುವೆ ತೀವ್ರ ವಾಗ್ವಾದ ನಡೆದಿದ್ದು, ನಂತರ ಕೋಪದಿಂದ ಪತಿ ಮಹಿಳೆಯನ್ನು ಹಾಸಿಗೆಗೆ ಕಟ್ಟಿ ಬೆಂಕಿ ಹಚ್ಚಿದ್ದಾನೆ. ಪಿಂಕಿ ಬೆಂಕಿಯ ಕೆನ್ನಾಲಿಗೆಯಲ್ಲಿ ಹೊತ್ತಿಯುರಿಯುತ್ತಿರುವುದನ್ನು ನೋಡಿ ನಂತರ ಸುಖದೇವ್ ಸ್ಥಳದಿಂದ ಓಡಿಹೋಗಿದ್ದಾನೆ.

ರಾಷ್ಟ್ರೀಯ ಮಹಿಳಾ ಆಯೋಗವೂ (ಎನ್‌ಸಿಡಬ್ಲ್ಯು) ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಪಂಜಾಬ್ ಪೊಲೀಸರಿಂದ ವಿವರವಾದ ವರದಿಯನ್ನು ಕೇಳಿದೆ. ರಾಷ್ಟ್ರೀಯ ಮಹಿಳಾ ಆಯೋಗವು ಈ ಭೀಕರ ಘಟನೆಯನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಖಂಡಿಸಿದೆ ಮತ್ತು ಕ್ರೌರ್ಯವನ್ನು ಕಲ್ಪಿಸಿಕೊಳ್ಳಲಾಗದು ಎಂದು ವಿವರಿಸಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿ ಪತಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net