

ಮೈಸೂರು: ನಗರದ ಕನಕಗಿರಿಯಲ್ಲಿ ವರದಕ್ಷಿಣೆ ಕಿರುಕುಳ ತಾಳಲಾರದೆ ಎಂಟು ತಿಂಗಳ ಗರ್ಭಿಣಿಯೊಬ್ಬರು ಗುರುವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚೈತ್ರಾ ಅಲಿಯಾಸ್ ಚಿಕ್ಕದೇವಿ (23) ಆತ್ಮಹತ್ಯೆಗೆ ಶರಣಾದ ಗರ್ಭಿಣಿ. ಎರಡು ವರ್ಷಗಳ ಹಿಂದೆ ಕನಕಗಿರಿಯ ಶರತ್ ರಾಜು ಎಂಬುವರನ್ನು ಚೈತ್ರ ವಿವಾಹವಾಗಿದ್ದರು. ಇದೀಗ ಗಂಡ ಶರತ್ ರಾಜು, ಮಾವ ಮುತ್ತುರಾಜ್, ಅತ್ತೆ ಪದ್ಮ, ಚಿಕ್ಕತ್ತೆ ಮಂಜು ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ. ಈ ಸಂಬಂಧ ಚೈತ್ರಾ ಪಾಲಕರು ನಾಲ್ವರ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಶರತ್ ರಾಜುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.