ಹಾಸನದವರು ಅಂದ್ರೆ ವಡ್ಡ ಜನಗಳು ಬುದ್ದಿ ಕಮ್ಮಿ: ಮಂಗಳೂರು ಮಿತ್ರ ಮಂಡಳಿ ಕಾರ್ಯಕ್ರಮದಲ್ಲಿ ಪ್ರೀತಂ ಗೌಡ ಹೇಳಿಕೆ…

preetham gowda
Published on

ಹಾಸನ: ಕರಾವಳಿ ಮಿತ್ರ ಮಂಡಳಿ‌ ಸಭೆಯಲ್ಲಿ ಹಾಸನ ಬಿಜೆಪಿ‌ ಅಭ್ಯರ್ಥಿ ಪ್ರೀತಮ್ ಗೌಡ ಭಾಷಣದ ತುಣುಕು ವೈರಲ್ ಆಗಿದೆ.

ಹಾಸನದ ಮಂಗಳೂರು ಮಿತ್ರ ಮಂಡಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರೀತಂ ಗೌಡ ಇನ್ನೇನು ಚುನಾವಣೆ ಇರುವಾಗ "ಮಂಗಳೂರಿನವರು ಹೆಗಿರಬೇಕು‌ ಹಂಗಿರಬೇಕು ಮಾರಾಯ. ಹಾಸನದವರು ಅಂದ್ರೆ ವಡ್ಡ ಜನಗಳು, ಬುದ್ದಿ ಕಮ್ಮಿ. ಹಾಗಾಗಿ ನಾನು ಕಂಪೇರಿಸನ್ ಮಾಡೋದಾದ್ರೆ ,ಮಂಗಳೂರು ಜನರನ್ನ ನೋಡಿ ಬುದ್ದಿ ಕಲಿರ್ರೋ ಮಾರಾಯ ಅಂತ ಹೇಳ್ತಿನಿ

ನಾನು ಮಂಗಳೂರು ಮಿತ್ರ ಮಂಡಲಿಯವರನ್ನ ಕೇಳಿಕೊಳ್ಳೊದಿಷ್ಟೆ. ನೀವು ಹಾಸನದ ಜನತೆ ಸೇರಿ ಹಾಸನದವರ ರೀತಿ ಆಗಬೇಡಿ. ಹಾಸನವರನ್ನ ಮಂಗಳೂರಿಗರ ಥರ ಮಾಡಿ ಅಂತ" ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಚುನಾವಣೆ ವೇಳೆ ಮಂಗಳೂರು ಮಿತ್ರ ಮಂಡಳಿ ಕಾರ್ಯಕ್ರಮಕ್ಕೆ ಹೋಗಿದ್ದ ಪ್ರೀತಮ್ ಗೌಡ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net