ಭವಿಷ್ಯ ರೂಪಿಸುವ ಆ್ಯನಿಫ್ರೇಮ್ಸ್ ಆ್ಯನಿಮೇಷನ್; ಸಾಕಷ್ಟು ವಿದ್ಯಾರ್ಥಿಗಳ ವೃತ್ತಿ ಕೌಶಲ, ತರಬೇತಿ

9
Published on

ಮೈಸೂರು: ಮೈಸೂರಿನ ನಿವೇದಿತನಗರದಲ್ಲಿ 14 ವರ್ಷಗಳಿಂದ ಆ್ಯನಿಫ್ರೇಮ್ಸ್ ಆ್ಯನಿಮೇಷನ್ ಕಾಲೇಜು ಸಾಕಷ್ಟು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದೆ. ಅವರಿಗೆ ವೃತ್ತಿ ಕೌಶಲ ತರಬೇತಿ ನೀಡಿ, ಬದ್ಧತೆ ಮೆರೆದಿದೆ.

ಈ ಕಾಲೇಜಿನಲ್ಲಿ ಆ್ಯನಿಮೇಷನ್ ಕಲಿತ ವಿದ್ಯಾರ್ಥಿಗಳು ಇಂದು ಜಗತ್ತಿನ ನಾನಾ ದೇಶಗಳಲ್ಲಿ ಉದ್ಯೋಗದಲ್ಲಿದ್ದು, ಸಿನಿಮಾ, ಕೈಗಾರಿಕೆ, ಪ್ಯಾಕೇಜಿಂಗ್, ವೆಬ್, ಗೇಮಿಂಗ್, ಆರ್ಕಿಟೆಕ್ಚರ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

3 ವರ್ಷದ ಬ್ಯಾಚುಲರ್ ಇನ್ ಮಲ್ಟಿಮೀಡಿಯಾ(ಬಿ.ವೋಕ್), 3 ವರ್ಷದ ಡಿಪ್ಲೊಮಾ ಇನ್ ಆ್ಯನಿಮೇಷನ್ ಫಿಲ್ಮ್ ಮೇಕಿಂಗ್, 2 ವರ್ಷದ ಡಿಪ್ಲೊಮಾ ಇನ್ ಮಲ್ಟಿಮೀಡಿಯಾ ಸೇರಿದಂತೆ ಹಲವಾರು ಕೋರ್ಸ್‌ಗಳಿದ್ದು, ಪಿಯು, ಎಸ್‌ಎಸ್‌ಎಲ್‌ಸಿ ಪಾಸ್, ಫೇಲ್ ಆದ 16 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಪ್ರವೇಶಾತಿ ಪಡೆಯಬಹುದಾಗಿದೆ. ಶುಲ್ಕ ಪಾವತಿಯಲ್ಲೂ ವಿನಾಯಿತಿ ನೀಡಲಾಗುತ್ತಿದ್ದು, ಕಂತಿನ ರೂಪದಲ್ಲಿ ಪಾವತಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

‘ನಮ್ಮಲ್ಲಿ ಉತ್ತಮ ಬೋಧಕ ವರ್ಗ ಹಾಗೂ ಮೆಂಟರ್‌ಗಳಿದ್ದಾರೆ. ಅವರು ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಬೋಧನೆ ಮತ್ತು ಮಾರ್ಗದರ್ಶನ ಮಾಡುತ್ತಾರೆ. ಗ್ರಂಥಾಲಯದ ವ್ಯವಸ್ಥೆ ಕೂಡ ಇದೆ. ಕೇವಲ ವಿದ್ಯೆ ಕಲಿಸುವುದಷ್ಟೆ ನಮ್ಮ ಕೆಲಸವಲ್ಲ. ನಮ್ಮ ಕಾಲೇಜಿಗೆ ದಾಖಲಾದ ವಿದ್ಯಾರ್ಥಿಗಳು ಅಂಕಪಟ್ಟಿ ಜತೆ, ಉದ್ಯೋಗ ಪತ್ರವನ್ನೂ ಕೈಯಲ್ಲಿ ಹಿಡಿದು ಕಾಲೇಜಿನಿಂದ ಹೊರಹೋಗಬೇಕು, ಇದೇ ನಮ್ಮ ಆಶಯ. ಈ ಕಾರಣಕ್ಕಾಗಿಯೇ ಪ್ರತಿವರ್ಷ ಕ್ಯಾಂಪಸ್ ಸೆಲೆಕ್ಷನ್ ನಡೆಸಲಾಗುತ್ತದೆ. ಕ್ಯಾಂಪಸ್ ಸೆಲೆಕ್ಷನ್ ಆಗದಿದ್ದರೆ, ಅಂತಹ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ವಿಶೇಷ ತರಗತಿ ಹಾಗೂ ಮಾರ್ಗದರ್ಶನ ಮಾಡಿ ಉದ್ಯೋಗ ಗಿಟ್ಟಿಸಿಕೊಳ್ಳುವ ಅರ್ಹತೆ ಕಲ್ಪಿಸಿಕೊಡಲಾಗುತ್ತದೆ’ ಎಂದು ಕಾಲೇಜಿನ ನಿರ್ದೇಶಕ ರಘುವೀರ್ ನಾಯಕ್ ಬದಾಮಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net