

# ನನ್ನ ಮಗನಿಗೆ 24 ವರ್ಷ. ಎಂಬಿಎ ಪದವೀಧರ. ಪ್ರತಿ ತಿಂಗಳು ರೂ. 30 ಸಾವಿರ ಸಂಬಳ ಬರುತ್ತದೆ. ಮ್ಯೂಚುವಲ್ ಫಂಡ್ ಎಸ್ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ)ಯಲ್ಲಿ ಪ್ರತಿ ತಿಂಗಳು ರೂ. 4 ಸಾವಿರ ಹೂಡಬೇಕೆಂದು ಬಯಸಿದ್ದಾನೆ. ಆದರೆ ನಾನು ಇತ್ತೀಚೆಗೆ ಇನ್ಶೂರೆನ್ಸ್ ಕಂಪನಿಯೊಂದು ಬಿಡುಗಡೆ ಮಾಡಿರುವ ಎಸ್ಐಐಪಿ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡಿದ್ದೇನೆ. ಯಾವುದು ಸರಿಯಾದ ನಿರ್ಧಾರ ದಯವಿಟ್ಟು ತಿಳಿಸಿ.
| ಪ್ರಸನ್ನ ಎಸ್.ಜಿ.ಎಸ್. ತುಮಕೂರು
# 5 ವರ್ಷಗಳ ಹಿಂದೆ ನನ್ನ ಮಗನ ಒಂದು ಪಿಪಿಎಫ್ ಖಾತೆ ತೆರೆದಿದ್ದು ಅದು ಚಾಲ್ತಿಯಲ್ಲಿದೆ. ಈಗ ಆತ ಜರ್ಮನಿಯಲ್ಲಿ ಕೆಲಸ ಮಾಡುತ್ತಿದ್ದು ಅನಿವಾಸಿ ಭಾರತಿಯನಾಗಿದ್ದಾನೆ (ಎನ್ಆರ್ಐ). ಮೆಚ್ಯೂರಿಟಿ ತನಕ ಪಿಪಿಎಫ್ ಅಕೌಂಟ್ ಮುಂದುವರಿಸಬಹುದೇ? ಅಥವಾ ಈಗಲೇ ಮುಚ್ಚಬೇಕೇ? ಮಾಹಿತಿ ನೀಡಿ.
| ಬಿಕೆಎಸ್ ಶಾಸ್ತ್ರಿ ಬೆಂಗಳೂರು
ನಿಮ್ಮೆದುರು ಎರಡು ಆಯ್ಕೆಗಳಿವೆ. ಆಯ್ಕೆ 1- ಎನ್ಆರ್ಐಗಳು ಪಿಪಿಎಫ್ ಖಾತೆ ತೆರೆಯುವಂತಿಲ್ಲ. ಆದರೆ ನಿಮ್ಮ ಮಗ 5 ವರ್ಷಗಳ ಹಿಂದೆ ಪಿಪಿಎಫ್ ಖಾತೆ ಆರಂಭಿಸಿದ್ದು, ಒಂದು ವರ್ಷದ ಹಿಂದಷ್ಟೇ ಜರ್ಮನಿಯಲ್ಲಿ ವಾಸಿಸುತ್ತಿರುವುದರಿಂದ ಖಂಡಿತ ಮೆಚ್ಯೂರಿಟಿವರೆಗೆ ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮುಂದುವರಿಸಬಹುದು. ಪಿಪಿಎಫ್ನಲ್ಲಿನ ಹೂಡಿಕೆಗೆ ಈ ಮೊದಲು ಸಿಗುತ್ತಿದ್ದ ಬಡ್ಡಿ ದರವೇ ಸಿಗಲಿದೆ. ಆದರೆ 15 ವರ್ಷಗಳ ಬಳಿಕ ಮತ್ತೆ ಪಿಪಿಎಫ್ ಹೂಡಿಕೆ ವಿಸ್ತರಣೆಗೆ ಎನ್ಆರ್ಐಗಳಿಗೆ ಅವಕಾಶವಿಲ್ಲ. ಆಯ್ಕೆ 2- ಪಿಪಿಎಫ್ ಖಾತೆ ಆರಂಭಿಸಿದ ಬಳಿಕ ವಿದೇಶದಲ್ಲಿ ವಾಸ ಮಾಡುವ ಸಂದರ್ಭ ಬಂದರೆ ಪಿಪಿಎಫ್ ಖಾತೆಯನ್ನು ಅವಧಿಗೆ ಮುನ್ನ ಮುಚ್ಚಲು ಡಿಸೆಂಬರ್ 2019ರಿಂದ ಅವಕಾಶ ಕಲ್ಪಿಸಲಾಗಿದೆ. ಹೊರದೇಶದಲ್ಲಿರುವವರಿಗೆ ಪಿಪಿಎಫ್ ಖಾತೆಯಲ್ಲಿ ಹಣ ತುಂಬಲು ಕಷ್ಟವಾಗಬಹುದು ಎಂದು ಈ ಆಯ್ಕೆ ನೀಡಲಾಗಿದೆ. ಪಾಸ್ಪೋರ್ಟ್ ಮತ್ತು ವೀಸಾ, ಐಟಿ ರಿಟರ್ನ್ಸ್ ದಾಖಲೆಗಳನ್ನು ನೀಡಿ ಖಾತೆ ಮುಚ್ಚಬಹುದು. ಆದರೆ ಹೀಗೆ ಅವಧಿಗೆ ಮೊದಲು ಖಾತೆ ಮುಚ್ಚಿದಾಗ ನಿಮಗೆ ಲಭಿಸಿರುವ ಬಡ್ಡಿ ಲಾಭದಲ್ಲಿ ಶೇ 1ರಷ್ಟನ್ನು ಮುರಿದು ಕೊಡಲಾಗುತ್ತದೆ.
# ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನಲ್ಲಿ ಸಾಲ ಪಡೆದಿದ್ದೇನೆಂದು ಸಿಬಿಲ್ ರಿಪೋರ್ಟ್ನಲ್ಲಿದೆ. ಅದು ನನಗೆ ಸಂಬಂಧಿಸಿಲ್ಲ. ಇದನ್ನು ಹೇಗೆ ಸರಿಪಡಿಸಲಿ?
| ಶಾಸ್ತ್ರಿ ಬಾಗಲಕೋಟೆ
ಮೊದಲಿಗೆ ಕ್ರೆಡಿಟ್ ರಿಪೋರ್ಟ್ನಲ್ಲಿ ಯಾವ ತಪ್ಪಿದೆ ಎನ್ನುವ ಮಾಹಿತಿಯನ್ನು ಭರ್ತಿ ಮಾಡಿ ಸಿಬಿಲ್ನ ಆನ್ಲೈನ್ ವ್ಯಾಜ್ಯ ಪರಿಹಾರ ವೇದಿಕೆಗೆ ದೂರು ನೀಡಬೇಕು. ಆನ್ಲೈನ್ನಲ್ಲಿ ದೂರು ಸಲ್ಲಿಸಿದ ಕೂಡಲೇ ನಿಮಗೆ ವ್ಯಾಜ್ಯ ಪರಿಹಾರ ವೇದಿಕೆಯ ಕಂಪ್ಲೇಂಟ್ ಐಡಿ ನಂಬರ್ ಸಿಗುತ್ತದೆ. ಸಿಬಿಲ್ ನಿಮ್ಮ ಅರ್ಜಿಯನ್ನು ಬ್ಯಾಂಕ್ಗೆ ಕಳುಹಿಸಿ ಲೋಪಗಳನ್ನು ಸರಿಪಡಿಸುವಂತೆ ಕೋರುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು 30 ದಿನ ಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: ಸಿಬಿಲ್ ಸಹಾಯವಾಣಿ - 02261404300, 02266384600
ಬೆಂಗಳೂರಿನಲ್ಲಿ ಕಾರ್ಯಾಗಾರ
ಇಂಡಿಯನ್ ಮನಿ ಡಾಟ್ ಕಾಂ ಸಿಇಒ ಸಿಎಸ್ ಸುಧೀರ್ ಸಾರಥ್ಯದಲ್ಲಿ ಒಂದು ದಿನದ ಫೈನಾನ್ಶಿಯಲ್ ಫ್ರೀಡಂ ಕಾರ್ಯಾಗಾರ ನಡೆಯಲಿದೆ. ಕಾರ್ಯಾಗಾರದಲ್ಲಿ ಹಣಕಾಸು ನಿರ್ವಹಣೆ, ಉಳಿತಾಯ, ಹೂಡಿಕೆ, ತೆರಿಗೆ ನಿರ್ವಹಣೆ ಬಗ್ಗೆ ವಿಸõತವಾಗಿ ತಿಳಿಸಿಕೊಡಲಾಗುತ್ತದೆ. ಪಾಲ್ಗೊಳ್ಳಲು ಇಚ್ಛಿಸುವವರು 8655097256 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿ.
ಮಾರ್ಚ್ 31ರ ಒಳಗಾಗಿ ಮಾಡಬೇಕಿರುವ ಕೆಲಸಗಳು
ನೀವೂ ಪ್ರಶ್ನೆ ಕೇಳಬಹುದು
ಮನಿ ಮಾತು ಅಂಕಣದಲ್ಲಿ ಆರ್ಥಿಕ ವಿಚಾರಗಳ ಬಗ್ಗೆ ಮಾಹಿತಿ ವಿಶ್ಲೇಷಣೆಗಳನ್ನು ನೀಡುವುದು ಮಾತ್ರವಲ್ಲ, ಓದುಗರ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಾಗುತ್ತದೆ. ಹೂಡಿಕೆ, ಉಳಿತಾಯ, ತೆರಿಗೆ, ವಿಮೆ, ಷೇರು ಮಾರುಕಟ್ಟೆ - ಹೀಗೆ ವಿತ್ತರಂಗಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕಳುಹಿಸಬಹುದು. ನಮ್ಮ ತಜ್ಞರ ತಂಡದವರು ಉತ್ತರ ನೀಡುತ್ತಾರೆ. ಪ್ರಶ್ನೆ ಕಳಿಸುವವರು ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ನಮೂದಿಸಿ. ಪ್ರಶ್ನೆ ಕಳಿಸಬೇಕಾದ ಇಮೇಲ್: vittasuggi@gmail.com