

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ನವೆಂಬರ್ನಲ್ಲಿ ಕಾಂಗ್ರೆಸ್ ಪಾಳಯದಲ್ಲಿ ನಾಯಕತ್ವ ಬದಲಾವಣೆ ಆಗಬಹುದು, ಆಗಲ್ಲ ಎಂಬ ಚರ್ಚೆಗಳು ಹೆಚ್ಚಾಗಿವೆ. ಈ ಚರ್ಚೆ ಬೆನ್ನಲ್ಲೇ ಇದೀಗ ಡಿಕೆಶಿ ( DK Shivakumar ) ಸಿಎಂ ಆಗಲು ಮೆಕ್ಕಾದಲ್ಲಿ ಪ್ರಾರ್ಥನೆ ಮಾಡಿದ್ದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಡಿಕೆ ಶಿವಕುಮಾರ್ ಸಿಎಂ ಆಗ್ಬೇಕು ಎಂದು ಪ್ರಾರ್ಥನೆ ಮಾಡಿದ ರಿಜ್ವಾನ್ ಪಾಷಾ ಎಂಬುವವರು ಬೆಂಗಳೂರು ದಕ್ಷಿಣ ಜಿಲ್ಲೆ ಯೂತ್ ಕಾಂಗ್ರೆಸ್ನ ಉಪಾಧ್ಯಕ್ಷರಾಗಿದ್ದಾರೆ. ಮೆಕ್ಕಾದಲ್ಲಿ ಡಿಕೆ ಶಿವಕುಮಾರ್ ಸಹೋದರರ ಫೋಟೋ ಹಿಡಿದು ಪ್ರಾರ್ಥನೆ ಮಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ?:
ನಾನು ಕರ್ನಾಟಕ ರಾಜ್ಯದಿಂದ ಮೆಕ್ಕಾಗೆ ಬಂದಿದ್ದೇನೆ. ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಇಬ್ಬರು ನನ್ನ ಕಣ್ಣುಗಳು ಇದ್ದ ಹಾಗೆ. ಡಿಕೆ ಶಿವಕುಮಾರ್ ಅವರು ಮುಂದೆ ಮುಖ್ಯಮಂತ್ರಿಯಾಲಿ ಎಂದು ಪ್ರಾರ್ಥನೆ ಮಾಡಲು ನಾನು ಮೆಕ್ಕಾಗೆ ಬಂದಿದ್ದೇನೆ. ಇಲ್ಲಿಗೆ ಬಂದ್ರೆ ಯಾವ ಹರಕೆ ಮಾಡಿದ್ರು ಕಾಪಾಡುತ್ತಾನೆ ಎನ್ನುವುದು ಮುಸಲ್ಮಾನ ಜನರು ಮಾತ್ರವಲ್ಲ ಇಡೀ ಪ್ರಪಂಚದ ಜನ ನಂಬಿಕೆಯಾಗಿದೆ. ಮುಂದಿನ ದಿನಗಳಲ್ಲಿ ಡಿಕೆಶಿ ಅವರನ್ನು ಸಿಎಂ ಮಾಡಬೇಕು ಎಂದು ನಾನು ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ಅವರ ಬಳಿ ಮನವಿ ಮಾಡುತ್ತೇನೆ. ಮೆಕ್ಕಾದಲ್ಲಿ ಅಲ್ಲಾನ ಬಳಿ ಪ್ರಾರ್ಥನೆ ಮಾಡುತ್ತೇನೆ.. ಜೈ ಹಿಂದ್.. ಜೈ ಕರ್ನಾಟಕ, ಜೈ ಹಿಂದೂಸ್ತಾನ್ ಎಂದಿದ್ದಾರೆ.
ಡಿ.ಕೆ. ಶಿವಕುಮಾರ್ ಅವರನ್ನ ಸಿಎಂ ಮಾಡಬೇಕು ಎಂದು ಮೆಕ್ಕಾದಲ್ಲಿ ನಿಂತು ಪ್ರಾರ್ಥನೆ ಮಾಡ್ತಿರೋದಾಗಿ ರಿಜ್ವಾನ್ ಪಾಷಾ ಹೇಳಿದ್ದಾರೆ. ಮೊಬೈಲ್ನಲ್ಲಿ ನಾಯಕ ಫೋಟೋ ಹಿಡಿದು ಪ್ರಾರ್ಥನೆ ಸಲ್ಲಿಸಿದ್ದಾರೆ.