ಪ್ರಯಾಗರಾಜ್ ಯಾತ್ರಿಕರಿಗೂ ಸೈಬರ್ ಕಳ್ಳರ ಕಾಟ

Cyber Crime
Published on

ಬೆಂಗಳೂರು: ಸದಾಶಿವನಗರದ ನಿವೃತ್ತ ಅಧಿಕಾರಿಗೆ ಸೈಬರ್ ಕಳ್ಳರು 33 ಸಾವಿರ ರೂ. ವಂಚಿಸಿದ್ದಾರೆ.

ಕುಂಭಮೇಳಕ್ಕೆ ಹೋಗುವ ಸಲುವಾಗಿ ಬೆಂಗಳೂರಿನಿಂದ ವಾರಾಣಾಸಿಗೆ ಹೋಗಿದ್ದ ನಿವೃತ್ತ ಅಧಿಕಾರಿ, ಅಲ್ಲಿಂದ ಪ್ರಯಾಗರಾಜ್ ಹೋಗಲು ವಿಮಾನ ಟಿಕೆಟ್ ಬುಕ್ ಮಾಡಿದ್ದರು.

ಆದರೆ, ಜನಜಂಗುಳಿ ಇದ್ದ ಕಾರಣಕ್ಕೆ ಪ್ರಯಾಗರಾಜ್‌ಗೆ ಹೋಗದೆ ವಾಪಸ್ ಬೆಂಗಳೂರಿಗೆ ಬರುವ ಉದ್ದೇಶಕ್ಕೆ ವಾರಣಾಸಿಯಿಂದ ಬೆಂಗಳೂರಿಗೆ ವಿಮಾನ ಟಿಕೆಟ್ ಬುಕ್ ಮಾಡಲು ಗೂಗಲ್‌ನಲ್ಲಿ ಸ್ಪೈಸ್ ಜೆಟ್ ಕಸ್ಟಮರ್ ಕೇಸ್ ನಂಬರ್ ಹುಡುಕಾಟ ನಡೆಸಿದ್ದರು.

ಅದರಲ್ಲಿ ಸಿಕ್ಕ ಮೊಬೈಲ್‌ಗೆ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿಗಳು, ಮೊಬೈಲ್ ಸ್ಕ್ರೀನ್ ಶೇರಿಂಗ್ ಮಾಡಿಕೊಂಡು, ಪ್ರವಾಸಿಯ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 33 ಸಾವಿರ ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ.

ನೊಂದ ನಿವೃತ್ತ ಅಧಿಕಾರಿ ಕೊಟ್ಟ ದೂರಿನ ಮೇರೆಗೆ ಕೇಂದ್ರ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net