

ಕಾರ್ಗಲ್: ಸರ್ಕಾರಿ ಪ್ರೌಢಶಾಲೆಯಿಂದ ಆಯೋಜಿಸಿದ್ದ 2024-25ನೇ ಸಾಲಿನ ಭಾರಂಗಿ ಹೋಬಳಿ ವ್ಯಾಪ್ತಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವನ್ನು ಪಪಂ ಅಧ್ಯಕ್ಷ ಎಂ.ರಾಜು ಉದ್ಘಾಟಿಸಿದರು.
ಭರತನಾಟ್ಯ, ಚಿತ್ರಕಲೆ, ರಂಗೋಲಿ, ಧಾರ್ಮಿಕ ಪಠಣ, ಕವಾಲಿ, ಆಶುಭಾಷಣ, ಗುಂಪು ನೃತ್ಯ, ಸಾಮಾನ್ಯ ಜ್ಞಾನ, ಚರ್ಚಾ ಸ್ಪರ್ಧೆ ಸೇರಿ ಒಟ್ಟು 13 ಸ್ಪರ್ಧೆ ಏರ್ಪಡಿಸಲಾಗಿತ್ತು. ಪಪಂ ಸದಸ್ಯ ಪಿ.ಮಂಜುನಾಥ್, ಕೆಪಿಸಿ ಚೀಫ್ ಇಂಜಿನಿಯರ್ ಜಿ.ಇ.ಮೋಹನ್, ಶರಾವತಿ ವರ್ತಕ ಸಂಘದ ಗೌರವಾಧ್ಯಕ್ಷ ಮೋಹನ್ ಎಂ.ಪೈ, ಎಸ್‌ಡಿಎಂಸಿ ಅಧ್ಯಕ್ಷ ಟಿ.ಸುರೇಶ್, ಭಾರತಿ ಹೆಗಡೆ, ಮಲ್ಲಿಕಾರ್ಜುನ ಸ್ವಾಮಿ, ಇಲೋರಿನ್ ಲೋಪಿಸ್, ಗೌರಮ್ಮ ನರಸಿಂಹ ಮೂರ್ತಿ, ರಾಘವೇಂದ್ರ, ಮಮತಾ ಜಾಲಿಗದ್ದೆ, ನಾಗರಾಜ್ ಜೈನ್, ಸಿಆರ್‌ಪಿ ಸತೀಶ್, ಜೋಗ ಪಿಯು ಕಾಲೇಜು ಪ್ರಾಚಾರ್ಯ ಮಂಜುನಾಥ್, ರಾಜೇಶ್ ಇತರರಿದ್ದರು. ವಿವಿಧ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.