

ಪಂಚನಹಳ್ಳಿ: ಮಕ್ಕಳ ಸೂಕ್ತ ಪ್ರತಿಭೆಗಳನ್ನು ಹೊರತರಲು, ಪಠ್ಯತರ ಚಟುವಟಿಕೆಗಳನ್ನು ಗುರುತಿಸಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಬಿ.ಟಿ.ಪ್ರೇಮ್ಕುಮಾರ್ ತಿಳಿಸಿದರು.
ಬುಧವಾರ ಶ್ರೀ ಕಲ್ಲೇಶ್ವರ ಕಾನ್ವೆಂಟ್ ಶಾಲಾ ಆವರಣ ನಡೆದಲ್ಲಿ ನಡೆದ ಸಿಂಗಟಗೆರೆ ಮತ್ತು ವೈ ಮಲ್ಲಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಭೈರೇಗೌಡ ಮಾತನಾಡಿ,ಮಕ್ಕಳ ವಿವಿಧ ಪ್ರತಿಭೆಯನ್ನು ಪಾಲಕರು ಗುರುತಿಸಿ ಪ್ರೋತ್ಸಾಹಿಸಬೇಕು. ಪ್ರತಿಭೆಗೆ ತಕ್ಕ ಶಿಕ್ಷಣ ನೀಡುವುದು ಪಾಲಕರ ಕರ್ತವ್ಯ ಎಂದು ತಿಳಿಸಿದರು.
ಸಂಸ್ಥೆ ಮುಖ್ಯಸ್ಥರಾದ ಸೋಮಶೆ ೀಖರ್, ಬಿಜೆಪಿ ಮಂಡಲ ಅಧ್ಯಕ್ಷ ಬಿ.ಪಿ.ದೇವನಂದ, ಶಿಕ್ಷಣ ಸಂಯೋಜಕ ದಿನೇಶ್, ಮಲ್ಲಿಕಾರ್ಜುನ್, ಲಿಂಗರಾಜು, ತಿಮ್ಮಪ್ಪ, ಹರೀಶ್, ಕಲ್ಲಶಪ್ಪ, ಮೋಹನ್ ಕುಮಾರ್, ರಾಜನಾಯಕ್, ರವಿ, ಗಿರೀಶ್ ಆರಾಧ್ಯ, ಗ್ರಾಪಂ ಅಧ್ಯಕ್ಷೆ ಮಧುಮಲಾ, ಮುಖ್ಯ ಶಿಕ್ಷಕ ಸುಧಾ ಇದ್ದರು.