ಪ್ರತಿಭಾ ಪುರಸ್ಕಾರ ಸಮಾರಂಭ ಫೆ. 8ರಂದು

je721538035802367-abc
Published on

ರಾಣೆಬೆನ್ನೂರ: ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜ್‌ನ 2023-24 ನೇ ಸಾಲಿನ ವಿದ್ಯಾರ್ಥಿ ಸಂಘ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಕ್ರೀಡಾ ಸಂಘ, ಸ್ಕೌಟ್ ಗೈಡ್ಸ್, ಭಾರತ್ ಸೇವಾದಳದ ಚಟುವಟಿಕೆಗಳ ಸಮಾರೋಪ ಹಾಗೂ ಪ್ರತಿಭಾ ಪುರಸ್ಕಾರ ಸಮಾರೋಪ ಸಮಾರಂಭ ಫೆ. 8ರಂದು ಬೆಳಗ್ಗೆ 10.30ಕ್ಕೆ ಜರುಗಲಿದೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶಂಭು ಬಳಿಗಾರ ಬಹುಮಾನ ವಿತರಣೆ ಮಾಡುವರು. ಡಿಡಿಪಿಯು ಡಾ. ಉಮೇಶಪ್ಪ ಎಚ್., ಬಿಇಒ ಎಂ.ಎಚ್. ಪಾಟೀಲ, ಸಲಹಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಅರಳಿ, ಉಪಾಧ್ಯಕ್ಷ ಆರ್.ಬಿ. ತೋಟಗೇರ ಮತ್ತಿತರರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net