ಪ್ರಶಾಂತಕುಮಾರ ಅವರಿಗೆ ಪಿಎಚ್.ಡಿ ಪ್ರದಾನ

15-RNR-05 prashantkumar
Published on

ಹಾವೇರಿ: ನಗರದ ಆಕ್ಸ್‌ಫರ್ಡ್ ಪದವಿ ಪೂರ್ವ ಕಾಲೇಜ್‌ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಗುತ್ತಲ ಪಟ್ಟಣದ ನಿವಾಸಿ ಪ್ರಶಾಂತಕುಮಾರ ಬೆನ್ನೂರ ಅವರಿಗೆ ಹಂಪಿ ವಿಶ್ವವಿದ್ಯಾಲಯ ಪಿಎಚ್.ಡಿ ಪ್ರದಾನ ಮಾಡಿದೆ.
ಇವರು ಶಿಗ್ಗಾಂವಿ ಎಸ್‌ಆರ್‌ಜಿವಿ ಪದವಿ ಕಾಲೇಜ್‌ನ ಉಪನ್ಯಾಸಕ ಡಾ. ಬಿ.ಎಸ್. ನರೇಗಲ್ಲ ಅವರ ಮಾರ್ಗದರ್ಶನದಲ್ಲಿ ‘ಸಿರಿಧಾನ್ಯ ಬೆಳೆಗಳ ಉತ್ಪಾದನೆ ಮತ್ತು ಮಾರುಕಟ್ಟೆ ಹಾವೇರಿ ಜಿಲ್ಲೆಯನ್ನು ಅನುಲಕ್ಷಿಸಿ’ ಎಂಬ ವಿಷಯ ಕುರಿತು ಪ್ರಬಂಧ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net