ಕಾಂಗ್ರೆಸ್ ಜತೆ ಕೈಜೋಡಿಸಲು ನಿರಾಕರಿಸಿದ ಚುನಾವಣಾ ತಂತ್ರಗಾರ!

prashantkishor1
Published on

ನವದೆಹಲಿ: ಕಾಂಗ್ರೆಸ್​ ಜತೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕೈಜೋಡಿಸಲಿದ್ದಾರೆ ಎಂಬ ಸುದ್ದಿ ಕಳೆದ ಒಂದು ವಾರದಿಂದ ಹರಿದಾಡುತ್ತಿದ್ದು, ಇದೀಗ ಅದಕ್ಕೊಂದು ಸ್ಪಷ್ಟನೆ ಸಿಕ್ಕಿದೆ. ಆ ಕುರಿತು ಖುದ್ದು ಪ್ರಶಾಂತ್ ಕಿಶೋರ್ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

2024ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಏ.16ರಂದು ಸೋನಿಯಾ ಗಾಂಧಿ ನಿವಾಸದಲ್ಲಿ ನೀಡಿದ ಪ್ರೆಸೆಂಟೇಷನ್ ಸಂದರ್ಭ ಕಾಂಗ್ರೆಸ್​​ಗೆ ಸೇರುವಂತೆ ಪ್ರಶಾಂತ್ ಕಿಶೋರ್​ಗೆ ಆಫರ್ ನೀಡಲಾಗಿತ್ತು. ಕಾಂಗ್ರೆಸ್​ಗೆ ಸೇರುವಂತೆ ಪ್ರಶಾಂತ್ ಕಿಶೋರ್​ಗೆ ಆಹ್ವಾನ ನೀಡಲಾಗಿದೆ. ಸಲಹೆಗಾರರಾಗಿ ಸೇರುವ ಬದಲು ಪಕ್ಷಕ್ಕೆ ಅಧಿಕೃತವಾಗಿ ಸೇರುವ ಜತೆಗೆ ನಾಯಕರಂತೆ ಕೆಲಸ ಮಾಡುವ ಆಹ್ವಾನವನ್ನೇ ನೀಡಲಾಗಿದೆ ಎಂದು ಹೇಳಲಾಗಿತ್ತು.

ಆದರೆ ಈ ಆಫರ್ ನಿರಾಕರಿಸಿದ್ದಾಗಿ ಪ್ರಶಾಂತ್ ಕಿಶೋರ್ ಖಚಿತಪಡಿಸಿದ್ದಾರೆ. ಕಾಂಗ್ರೆಸ್​ ಪಕ್ಷದ ಎಂಪವರ್ಡ್​ ಆ್ಯಕ್ಷನ್​ ಗ್ರೂಪ್​ಗೆ ಸೇರಿ ಚುನಾವಣಾ ಜವಾಬ್ದಾರಿ ನಿಭಾಯಿಸುವ ಆಫರ್​​ ನಾನು ನಿರಾಕರಿಸಿದ್ದೇನೆ. ಪಕ್ಷದಲ್ಲಿ ಆಳವಾಗಿ ಬೇರೂರಿರುವ ಸಮಸ್ಯೆಗಳ ನಿವಾರಣೆಗೆ ಬಹಳಷ್ಟು ಸುಧಾರಣೆ ತರುವ ಇಚ್ಛಾಶಕ್ತಿಯ ಅಗತ್ಯವಿದೆ ಎಂದಿರುವ ಅವರು ನನಗಿಂತಲೂ ಪಕ್ಷಕ್ಕೇ ನಾಯಕತ್ವ ಬೇಕಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net