ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್ ಅಧ್ಯಕ್ಷರಾಗಿ ಪ್ರಶಾಂತ್ ಆಯ್ಕೆ

ಸಭೆಯಲ್ಲಿ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರಶಾಂತ್ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರಶಾಂತ್ ಅವರನ್ನು ಆಯ್ಕೆ ಮಾಡಲಾಯಿತು.
Published on
ಮಂಗಳೂರು: ಚಿಲಿಂಬಿ ಆದರ್ಶನಗರದ ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್‌ನ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಅಸೋಸಿಯೇಶನ್‌ನ ಸಭಾಂಗಣದಲ್ಲಿ ನಿಕಟಪೂರ್ವ ಅಧ್ಯಕ್ಷ ಅಶೋಕ್ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರಶಾಂತ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವಿನೀತ್ ವಿ. ಸುವರ್ಣ, ಮಹಿಳಾ ಉಪಾಧ್ಯಕ್ಷೆಯಾಗಿ ಪ್ರತೀಕ್ಷಾ ಕಿಶೋರ್, ಕಾರ್ಯದರ್ಶಿಯಾಗಿ ಕಿಶೋರ್ ಕೋಟ್ಯಾನ್, ಜೊತೆ ಕಾರ್ಯದರ್ಶಿಯಾಗಿ ಪ್ರಥಮ್ ಎಸ್. ಪೂಜಾರಿ, ಕೋಶಾಧಿಕಾರಿಯಾಗಿ ಶೋಭಾ ಅಶೋಕ್ ಆಯ್ಕೆಯಾದರು.
ಸಂಘಟನಾ ಕಾರ್ಯದರ್ಶಿಗಳಾಗಿ ಸೃಜನ್ ರಾಜೇಂದ್ರ, ಲಕ್ಷ್ಮಣ್, ಅಪರ್ಣ ವೈ. ಅಮೀನ್ ಮತ್ತು ನಮೃತಾ ರಾಜೇಶ್, ಕ್ರೀಡಾ ಕಾರ್ಯದರ್ಶಿ ಗಳಾಗಿ ಸಂತೋಷ್, ನಿತಿನ್, ಯಶೋಧ ಮಹೇಶ್. ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಅನಿತಾ ನಾಗರಾಜ್, ನಮಿತಾ ಸಂತೋಷ್, ರಮಿಳಾ ಕೋಟ್ಯಾನ್, ಚರಿತ್ ಹಾಗೂ ಸಮರ್ಥ್ ಆಯ್ಕೆಯಾದರು. ಇದೇ ವೇಳೆ ಆಂತರಿಕ ಲೆಕ್ಕ ಪರಿಶೋಧಕರಾಗಿ ಶುಭಾ ರಾಜೇಂದ್ರ ಹಾಗೂ ಕಟ್ಟಡ ಮೇಲ್ವಿಚಾರಕರಾಗಿ ನಳಿನಿ ಗೋಪಾಲ್ ಮತ್ತು ಅಜಿತ ವಸಂತ್ ಅವರನ್ನು ಆಯ್ಕೆಯಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net