ಪ್ರಣವ್ ಸ್ವರೂಪ್ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ

Oplus_131072
ಪ್ರಣವ್ ಸ್ವರೂಪ್
Published on

ಯಳಂದೂರು: ತಾಲೂಕಿನ ಚಾಮಲಾಪುರ ಗ್ರಾಮದ ಎಸ್.ಪ್ರಣವ್ ಸ್ವರೂಪ್ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 99.04 ರಷ್ಟು ಅಂಕ ಗಳಿಸಿದ್ದಾನೆ.

ಕುದೇರು ಪೊಲೀಸ್ ಠಾಣೆಯ ಮುಖ್ಯ ಪೇದೆ ಸಿ.ಜಿ.ಸತೀಶ್ ಹಾಗೂ ರಶ್ಮಿ ದಂಪತಿ ಪುತ್ರನಾಗಿರುವ ಈತ ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ವ್ಯಾಸಂಗ ಮಾಡಿದ್ದ. ಕನ್ನಡದಲ್ಲಿ 124, ಇಂಗ್ಲಿಷ್ 100, ಹಿಂದಿ 98, ಗಣಿತ 99, ವಿಜ್ಞಾನ 98, ಸಮಾಜ ವಿಜ್ಞಾನದಲ್ಲಿ 100 ಅಂಕ ಗಳಿಸುವ ಮೂಲಕ ಒಟ್ಟು 619 ಅಂಕ ಗಳಿಸಿ ಈ ಸಾಧನೆ ಮಾಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net