

ಅಯೋಧ್ಯೆ: ಇಂದು ಉತ್ತರಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ 'ಪ್ರಾಣ ಪ್ರತಿಷ್ಠಾ' ಸಮಾರಂಭವು ಅದ್ದೂರಿಯಾಗಿ ನಡೆಯುತ್ತಿದ್ದು, ದೇಶದ ಜನತೆ ಹಾಗೂ ಗಣ್ಯಾತಿ ಗಣ್ಯರು ಸಂಭ್ರಮದಲ್ಲಿ ಪಾಲ್ಗೊಂಡು ರಾಮನ ದರ್ಶನಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಆದ್ರೆ, ಭಾರತದಿಂದ ಹೋಗಿ ಅನ್ಯ ದೇಶಗಳಲ್ಲಿ ನೆಲೆಸಿರುವ ಭಾರತೀಯರು ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ಆಗದಿದ್ದರೂ ತಾವಿರುವ ಜಾಗದಿಂದಲೇ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಈ ಮಧ್ಯೆ ನ್ಯೂಯಾರ್ಕ್ನಲ್ಲಿ ಭಾರೀ ಸಡಗರ ಮನೆಮಾಡಿದೆ.
ಅಮೆರಿಕಾದ ಮಿನ್ನೇಸೋಡಾದಲ್ಲಿನ ಹಿಂದೂ ದೇವಾಲಯದಲ್ಲಿ ಭಾರತೀಯ ವಲಸಿಗರು ರಾಮ ಭಜನೆಯನ್ನು ಹಾಡಿ, ಭಕ್ತಿಯಿಂದ ಸ್ಮರಿಸಿದ್ದಾರೆ. ಇದರ ಜತೆಗೆ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ರಾಮ ಜನ್ಮಭೂಮಿ ಸ್ಥಾಪನಾ ಸಮಿತಿಯು ಅಪಾರ ಸಂಖ್ಯೆಯ ಭಕ್ತಾಧಿಗಳಿಗೆ ವಿಶೇಷ ಕಾರ್ಯಕ್ರವನ್ನು ಆಯೋಜಿಸುವ ಮೂಲಕ ಹಲವು ವ್ಯವಸ್ಥೆಗಳನ್ನು ಮಾಡಿದೆ.
‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೂ ಮುನ್ನ ಅಮೆರಿಕದಾದ್ಯಂತ ಸಂಭ್ರಮಾಚರಣೆ ಶುರುವಾಗಿದ್ದು, ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ನಲ್ಲಿ 'ಓವರ್ಸೀಸ್ ಫ್ರೆಂಡ್ಸ್ ಆಫ್ ರಾಮ್ ಮಂದಿರ' ಸದಸ್ಯರು ಸ್ಥಳೀಯರಿಗೆ ಸಿಹಿ ವಿತರಿಸಿ, ಸಂಭ್ರಮಿಸಿದ್ದಾರೆ.
ಸಂಸ್ಥೆಯ ಸದಸ್ಯರಾದ ಪ್ರೇಮ್ ಭಂಡಾರಿ ಮಾತನಾಡಿ, "ಅಮೆರಿಕದಲ್ಲಿಯೂ ಈ ಕಾರ್ಯಕ್ರಮವನ್ನು ಹೆಚ್ಚು ಸಡಗರದಿಂದ ಆಚರಿಸಲಾಗುತ್ತಿದೆ. ನಮ್ಮೀ ಜೀವನ ಪೂರ ನಾವು ಈ ದಿವ್ಯ ದಿನವನ್ನು ನೋಡುತ್ತೀವಿ ಎಂದು ಅಂದುಕೊಂಡಿರಲಿಲ್ಲ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).