ಪುಂಡರನ್ನು ಹದ್ದುಬಸ್ತಿನಲ್ಲಿಡಲು ಹಿಂದೂ ಸಮಾಜ ಪೊಲೀಸ್ ಇಲಾಖೆ ಜತೆ ಸಹಕರಿಸಬೇಕು; ಪ್ರಮೋದ್ ಮುತಾಲಿಕ್

Pramod Muthalik
Published on

ಉಡುಪಿ: ಪಿಎಫ್​ಐ ಬ್ಯಾನ್ ಆದ ಮಾತ್ರಕ್ಕೆ ಪುಂಡಾಟಗಳು ನಿಲ್ಲುವುದಿಲ್ಲ. ಸಾವಿರಾರು ಕಮಿಟೆಡ್ ಕಾರ್ಯಕರ್ತರು ಇನ್ನೂ ಇದ್ದಾರೆ. ಕುತಂತ್ರ ಮತ್ತು ದೋಶದ್ರೋಹಿ ಪ್ರವೃತ್ತಿಯನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.

ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ರಸ್ತೆ ಮೇಲೆ 'ಚಡ್ಡಿಗಳೇ ನಾವು ಮತ್ತೆ ಬರುತ್ತೇವೆ' ಎಂಬ ಪಿಎಫ್​ಐ ಬರಹದ ವಿಚಾರವಾಗಿ ತಮ್ಮ ಆಕ್ರೋಶ ಹೊರಹಾಕಿದರು.

ಪಿಎಫ್​ಐ ಇನ್ನೂ ಆಕ್ಟಿವ್ ಆಗಿದೆ ಅನ್ನೋದರ ಸಂಕೇತ ಇದು. ಇವರ ಪುಂಡಾಟಿಕೆ ಕಡಿಮೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆ ರೂಪಿಸಬೇಕು. ಇವರ ಕುತಂತ್ರಕ್ಕೆ ಬಂಟ್ವಾಳದ ಬಹರ ಎಚ್ಚರಿಕೆಯಾಗಿದೆ. ಹೀಗಾಗಿ ಪೊಲೀಸ್ ಹಾಗೂ ಗುಪ್ತಚರ ಇಲಾಖೆ ಇನ್ನಷ್ಟು ಅಲರ್ಟ್​ ಆಗಬೇಕಿದೆ. ಪುಂಡರನ್ನು ಹದ್ದುಬಸ್ತಿನಲ್ಲಿಡಲು ಹಿಂದೂ ಸಮಾಜ ಪೊಲೀಸ್ ಇಲಾಖೆ ಜತೆ ಸಹಕರಿಸಬೇಕು ಎಂದರು.

ಸ್ವಾತಂತ್ರ್ಯ ಸ್ವಾತಂತ್ರ್ಯ ಸಿಕ್ಕಾಗಲೇ ಮುಸಲ್ಮಾನರಲ್ಲಿ ರಾಷ್ಟ್ರಪ್ರೇಮ, ರಾಷ್ಟ್ರೀಯತೆ ಭಿತ್ತಬೇಕಿತ್ತು. ತುಷ್ಟೀಕರಣ ಮಾಡಿ ಕಾಂಗ್ರೆಸ್ ಅವರನ್ನು ದಾರಿ ತಪ್ಪಿಸಿದೆ. ಕಾಂಗ್ರೆಸ್ ಮುಸ್ಲಿಮರನ್ನು ಪ್ರತ್ಯೇಕವಾಗಿ ಬೆಳೆಸಿದೆ. ಭಯೋತ್ಪಾಧನೆ, ಕೊಲೆ, ಗಲಭೆ ಕಾಂಗ್ರೆಸ್​​ನ ತುಷ್ಟೀಕರಣದ ಕೊಡುಗೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net