ದಾದಾಗಿರಿ ಮಾಡಿದರೆ ತಕ್ಕ ಶಾಸ್ತಿ

23Tmk_Promod_Mutalik
Published on

ತುಮಕೂರು: ಹಿಂದು ಕಾರ್ಯಕರ್ತರನ್ನು ಮುಟ್ಟಿದರೆ ಒಂದಕ್ಕೆ ಹತ್ತು ಉತ್ತರ ಕೊಡಬೇಕಾಗುತ್ತೆ. ಇನ್ಮೇಲೆ ನಿಮ್ಮ ಆಟ ನಡೆಯುವುದಿಲ್ಲ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಎಚ್ಚರಿಸಿದರು.

ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಜರಂಗದಳ ಜಿಲ್ಲಾ ಸಂಚಾಲಕ ಮಂಜುಭಾರ್ಗವ ಅವರ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ ಬಳಿಕ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕಾನೂನು, ಸಂವಿಧಾನ, ಕೋರ್ಟ್, ಪೊಲೀಸ್ ಇದೆ. ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದರೆ ಬಾಲ ಮುದುರಿಕೊಂಡು ನಿಲ್ಲಿಸಬೇಕು ಎಂದರು.

ಗೋಹತ್ಯೆ ನಿಷೇಧ ಜಾರಿಯಲ್ಲಿದ್ದರೂ ಕಸಾಯಿಖಾನೆ ನಡೆಸುತ್ತಿದ್ದು ಇನ್ಮೇಲೆ ನಡೆಯುವಂತಿಲ್ಲ. ಅಕ್ರಮ ಕಸಾಯಿಖಾನೆಗಳನ್ನು ಸರ್ಕಾರ ಮುಚ್ಚಿಸುತ್ತೊ ಅಥವಾ ನಾವು ಮುಚ್ಚಿಸಬೇಕೊ. ಇದನ್ನು ಸರ್ಕಾರವೇ ನಿರ್ಧರಿಸಬೇಕು. ಪೊಲೀಸ್ ಇಲಾಖೆಗೆ ಎಲ್ಲವೂ ಗೊತ್ತಿದೆ. ಅಂತವರನ್ನು ಹದ್ದುಬಸ್ತಿನಲ್ಲಿಡಬೇಕು ಎಂದು ಗುಡುಗಿದರು. ಈ ಪ್ರಕರಣ ಪೊಲೀಸರ ನಿರ್ಲಕ್ಷೃದಿಂದ ನಡೆದಿದೆ ಎಂದರು.

ಗೋವುಗಳ ರಕ್ಷಣೆ ಹಿಂದು ಕಾರ್ಯಕರ್ತರದ್ದು ಮಾತ್ರವಲ್ಲ. ಸಂಸದ, ಶಾಸಕರ ಜವಾಬ್ದಾರಿ ಕೂಡ ಇದೆ. ನಿಮ್ಮನ್ನು ಆರಿಸಿ ಕಳಿಸಿಲ್ಲವೇ, ಇನ್ಮೇಲೆ ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ನಡೆದರೆ ಎಂಪಿ, ಎಂಎಲ್‌ಎ ಮನೆ ಮುಂದೆ ಧರಣಿ ಮಾಡುತ್ತೇವೆ. ಇನ್ನೆಷ್ಟು ಹಿಂದು ಕಾರ್ಯಕರ್ತರನ್ನು ಬಲಿ ಕೊಡುತ್ತೀರಾ. ಬಿಜೆಪಿ ಸರ್ಕಾರಕ್ಕೂ ಎಚ್ಚರಿಕೆ ಕೊಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net