ಅನಂತನಾಗ್ ಜಾಗಕ್ಕೆ ಬಂದ್ರಾ ಪ್ರಕಾಶ್​ ರೈ; ಕೆಜಿಎಫ್​ ಚಾಪ್ಟರ್ 2 ಶೂಟಿಂಗ್​ ಫೋಟೋ ವೈರಲ್​

Prakash
Published on

ಲಾಕ್​ಡೌನ್​ನಿಂದ ಕಳೆದ ನಾಲ್ಕೈದು ತಿಂಗಳಿಂದ ಸ್ಥಗಿತಗೊಂಡಿದ್ದ ಚಿತ್ರೀಕರಣ ಕೆಲಸಗಳಿಗೆ ಇದೀಗ ಚಾಲನೆ ಸಿಕ್ಕಿದ್ದು, ಸಿನಿಮಾ ತಂಡಗಳು ಮತ್ತೆ ಕ್ಯಾಮರಾ ಆನ್​ ಮಾಡಿವೆ. ಇದೀಗ ಕೆಜಿಎಫ್​ ಚಾಪ್ಟರ್ 2 ತಂಡವೂ ಇಂದಿನಿಂದ ಚಿತ್ರೀಕರಣಕ್ಕೆ ಚಾಲನೆ ನೀಡಿದೆ. ಇದೀಗ ಮೊದಲ ದಿನದ ಶೂಟಿಂಗ್​ನ ಫೋಟೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಹೌದು, ಈ ಹಿಂದೆ ಆನಂದ್​ ಇಂಗಳಗಿ ಪಾತ್ರದಲ್ಲಿ ಅನಂತ್​ ನಾಗ್​ ಕಾಣಿಸಿಕೊಂಡಿದ್ದರು. ರಾಕಿ ಭಾಯಿ ಕಥೆಯನ್ನು ನಿರೂಪಣೆ ಮಾಡಿದ್ದರು. ಜತೆಗೆ ಇತ್ತೀಚಿನ ದಿನಗಳಲ್ಲಿ ಕಾರಣಾಂತರಗಳಿಂದ ಅನಂತ್​ನಾಗ್​ ಕೆಜಿಎಫ್​ ಸಿನಿಮಾದಿಂದ ಹೊರನಡೆದಿದ್ದರು ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಬಳಿಕ ಅವರ ಪಾತ್ರ ಯಾರು ಮಾಡಲಿದ್ದಾರೆ ಎಂಬ ಬಗ್ಗೆಯೂ ಚರ್ಚೆ ನಡೆದಿತ್ತು. ಇದೀಗ ಅದೆಲ್ಲದಕ್ಕೂ ಫೋಟೋ ಸಮೇತ ಉತ್ತರ ಸಿಕ್ಕಿದೆ.

ಮೊದಲ ಭಾಗದಲ್ಲಿ ಅನಂತ್​ ನಾಗ್​ ಮಾಡಿದ್ದ ಪಾತ್ರವನ್ನು ಚಾಪ್ಟರ್ 2ರಲ್ಲಿ ಪ್ರಕಾಶ್​ ರೈ ಮಾಡಲಿದ್ದಾರೆ. ಈಗಾಗಲೇ ಮಿನರ್ವ ಮಿಲ್​ನಲ್ಲಿ ಶೂಟಿಂಗ್​ ಸಹ ಶುರುವಾಗಿದ್ದು, ರೈ ಮತ್ತು ಮಾಳವಿಕಾ ಅವಿನಾಶ್ ಸಹ ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲ ಆನಂದ್​ ಇಂಗಳಗಿ ಲುಕ್​ನಲ್ಲಿ ಪ್ರಕಾಶ್​ ಅವರು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದಕ್ಕೂ ಫೋಟೋವೊಂದು ರಿವೀಲ್​ ಆಗಿದೆ.

ಯಶ್ ನಾಯಕತ್ವದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನ ಮಾಡುತ್ತಿದ್ದು, ವಿಜಯ್​ ಕಿರಗಂದೂರು ಬಂಡವಾಳ ಹೂಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net