ಚುನಾವಣಾ ಫಲಿತಾಂಶ ನೋಡಲಾಗದೇ ಸೆಲ್​ನಲ್ಲಿ ಕುಳಿತ ಪ್ರಜ್ವಲ್​​ ರೇವಣ್ಣ; ಟಿವಿ ವ್ಯವಸ್ಥೆಗೆ ನಿರಾಕರಿಸಿದ ಎಸ್​​ಐಟಿ…!

pmix
Published on

ತನ್ನ ರಿಸಲ್ಟ್ ತಾನೇ ನೋಡಲಾಗದ ಸ್ಥಿತಿಯಲ್ಲಿ ಪ್ರಜ್ವಲ್ ರೇವಣ್ಣ‌ ಇದ್ದಾರೆ. ಹಾಸನದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ‌. ಮತಎಣಿಕೆ ನಡೆಯುತ್ತಿದ್ರು ಫಲಿತಾಂಶ ನೋಡಲಾಗದ ಪ್ರಜ್ವಲ್ ಸುಮ್ಮನೆ ಕುಳಿತಿದ್ದಾರಂತೆ. ಫಲಿತಾಂಶ ನೋಡಲಾಗದೆ ಪ್ರಜ್ವಲ್‌ ರೇವಣ್ಣ ಬೇಸರದಲ್ಲಿದ್ದಾರಂತೆ. ಎಲೆಕ್ಷನ್​ ರಿಸಲ್ಟ್​ ಏನಾಗಿರಬಹುದು ಎಂದು ಪ್ರಜ್ವಲ್​ ಬೇಸರವನ್ನೂ ವ್ಯಕ್ತ ಪಡಿಸಿದ್ದಾರಂತೆ.

ಇಡೀ ದೇಶವೇ ಕೇಂದ್ರ ಸರ್ಕಾರವನ್ನು ಯಾರು ರಚಿಸಲಿದ್ದಾರೆ ಎಂದು ತಿಳಿಯಲು ಕಾದುಕುಳಿತಿದೆ. 543 ಅಭ್ಯರ್ಥಿಗಳ ಹಣೆಬರಹ ಮುಂದಿನ ಸರ್ಕಾರವನ್ನು ರಚಿಸಲಿದೆ. ಇನ್ನೂ ಇತ್ತ ತನ್ನ ರಿಸಲ್ಟ್‌ ನೋಡಲಾಗದೇ ಪ್ರಜ್ವಲ್‌ ರೇವಣ್ಣ ಸೈಲೆಂಟಾಗಿ ಎಸ್‌ಐಟಿ ಸೆಲ್‌‌ನಲ್ಲಿ ಕುಳಿತಿದ್ದಾರೆ.

ಆದ್ರೆ ಸದ್ಯದ ಮಟ್ಟಿಗೆ ಪ್ರಜ್ವಲ್​ ರೇವಣ್ಣ ಹಾಸನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net