ದೇವರಾಜೇಗೌಡರ ಬಂಧನ; ಬದಲಾದ ರಾಜಕೀಯ ಲೆಕ್ಕಾಚಾರ

dks
Published on

ಬೆಂಗಳೂರು:
ವಕೀಲ ದೇವರಾಜೇಗೌಡ ಹೇಳಿಕೆಯನ್ನೆ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ಹಣಿಯಲು ತೆರೆ ಮರೆಯಲ್ಲಿ ಜೆಡಿಎಸ್ ನಡೆಸಿದ್ದ ಪ್ರಯತ್ನಗಳು ಗುರಿ ಮುಟ್ಟುವ ಮುನವೇ ವಿಲವಾಗಿವೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಜೊತೆ ಮಾತನಾಡಿದ್ದ ಮೊಬೈಲ್ ರೆಕಾರ್ಡಿಂಗ್ ಮುಂದಿಟ್ಟುಕೊಂಡು ದೇವರಾಜೇಗೌಡರು ಸುದ್ದಿಗೋಷ್ಠಿ ನಡೆಸಿದ್ದು ಜೆಡಿಎಸ್‌ಗೆ ಪ್ರಬಲ ಅಸವಾಗಿತ್ತು. ಇದನ್ನೆ ನೆಪ ಮಾಡಿ ಜೆಡಿಎಸ್ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿ ಡಿಕೆಶಿ ಅವರ ರಾಜೀನಾಮೆಗೂ ಒತ್ತಾಯಿಸಿತ್ತು.
ಮತ್ತೊಂದು ಲೈಂಗಿಕ ಪ್ರಕರಣದಲ್ಲಿ ದೇವರಾಜೇಗೌಡರನ್ನು ಬಂಧನ ಮಾಡಿದ ಬಳಿಕ ಪ್ರಕರಣ ಮತ್ತೊಂದು ಟ್ವಿಸ್ಟ್ ತೆಗೆದುಕೊಂಡಿದೆ.
ದೇವರಾಜೇಗೌಡರು ಕಾಂಗ್ರೆಸ್ ನಾಯಕರು ಅಷ್ಟೆ ಅಲ್ಲ, ಜೆಡಿಎಸ್ ಮತ್ತು ಬಿಜೆಪಿ ನಾಯಕರುಗಳ ಜೊತೆಯೂ ಮಾತನಾಡಿರುವುದು ಅವುಗಳ ರೆಕಾರ್ಡಿಂಗ್ ಸಿಕ್ಕಿರುವುದರಿಂದ ಕೈ ನಾಯಕರು ನಿಟ್ಟುಸಿರು ಬಿಡುವಂತಾಗಿದೆ.
ಹಾಸನದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಕುಟುಂಬವನ್ನು ಎಡೆ ಬಿಡದೆ ಕಾಡುತ್ತಲೇ ಬಂದಿದ್ದ ದೇವರಾಜೇಗೌಡರು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಮ್ಮ ನಿಲುವು ಬದಲಿಸಿದ್ದರು. ನಿದಾನವಾಗಿ ಇದೆಲ್ಲವೂ ಕಾಂಗ್ರೆಸ್ ನಾಯಕರ ಕುಮ್ಮಕ್ಕು ಎನ್ನುವಂತೆ ಮಾತಿನ ಲಹರಿಯನ್ನು ಬದಲಿಸಿ ಬಿಜೆಪಿಯಲ್ಲಿ ಭದ್ರ ನೆಲೆ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದರು. ಅವರ ಬಂಧನದಿಂದಾಗಿ ಊಹಾಪೋಹ ಮತ್ತು ಕಪೋಕಲ್ಪಿತ ಘಟನೆಗಳು ಸೆರಿದಂತೆ ಎಲ್ಲದಕ್ಕೂ ತಾತ್ಕಾಲಿಕ ಬ್ರೇಕ್ ಸಿಕ್ಕಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net