ಅರ್​. ಪ್ರಜ್ಞಾನಂದಗೆ ಸೇಂಟ್​ ಲೂಯಿಸ್​ ರ್‍ಯಾಪಿಡ್‌-ಬ್ಲಿಟ್ಜ್​ ಪ್ರಶಸ್ತಿ

ಅರ್​. ಪ್ರಜ್ಞಾನಂದಗೆ ಸೇಂಟ್​ ಲೂಯಿಸ್​ ರ್‍ಯಾಪಿಡ್‌-ಬ್ಲಿಟ್ಜ್​ ಪ್ರಶಸ್ತಿ
ಅರ್​. ಪ್ರಜ್ಞಾನಂದಗೆ ಸೇಂಟ್​ ಲೂಯಿಸ್​ ರ್‍ಯಾಪಿಡ್‌-ಬ್ಲಿಟ್ಜ್​ ಪ್ರಶಸ್ತಿ
Published on

ಸೇಂಟ್​ ಲೂಯಿಸ್​ (ಅಮೆರಿಕ): ಭಾರತದ ಗ್ರಾಂಡ್​ ಮಾಸ್ಟರ್​ ಆರ್​. ಪ್ರಜ್ಞಾನಂದ ಕೊನೇ ಸುತ್ತಿನ ಪಂದ್ಯ ಬಾಕಿ ಇರುವಂತೆಯೇ ಸೇಂಟ್​ ಲೂಯಿಸ್​ ರ್‍ಯಾಪಿಡ್‌ ಆಂಡ್​ ಬ್ಲಿಟ್ಜ್​ ಚೆಸ್​ (

St. Louis Rapid and blitz chess

) ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 20 ವರ್ಷದ ಪ್ರಜ್ಞಾನಂದ ಒಟ್ಟಾರೆ 23.5 ಅಂಕ ಗಳಿಸುವ ಮೂಲಕ ಉಜ್ಬೇಕಿಸ್ತಾನದ ಜಾವೋಖಿರ್​ ಸಿಂಡರೋವ್​ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸಿದರು.


ಗ್ರಾಂಡ್​ ಚೆಸ್​ ಟೂರ್​ನ (ಜಿಸಿಟಿ) ರ್‍ಯಾಪಿಡ್‌-ಬ್ಲಿಟ್ಜ್​ ಸ್ಪರ್ಧೆಯ ಕೊನೇ ದಿನ ಒಂದೂ ಪಂದ್ಯವನ್ನು ಸೋಲದ ಪ್ರಜ್ಞಾನಂದ, ಮುಂಬರುವ ದಿನಗಳಲ್ಲಿ ನಡೆಯಲಿರುವ ಗ್ರಾಂಡ್​ ಫಿನಾಲೆಗೆ ಅರ್ಹತೆಯನ್ನು ಬಹುತೇಕ ಖಾತ್ರಿಪಡಿಸಿಕೊಂಡರು. ಇದು ಅಧಿಕೃತವಾಗಲು ಗ್ರಾಂಡ್​ ಚೆಸ್​ ಟೂರ್​ನಲ್ಲಿ ಕ್ಲಾಸಿಕಲ್​ ಮಾದರಿಯಲ್ಲಿ ನಡೆಯಲಿರುವ ಹಾಲಿ ಋತುವಿನ ಕೊನೇ ಟೂರ್ನಿಯಲ್ಲಿ ಪ್ರಜ್ಞಾನಂದ ಹಾಲಿ ಫಾರ್ಮ್​ ಕಾಯ್ದುಕೊಂಡು ಅಗ್ರ 3ರೊಳಗೆ ಸ್ಥಾನ ಗಳಿಸಬೇಕಿದೆ.

ರ್‍ಯಾಪಿಡ್‌​ ವಿಭಾಗದಲ್ಲಿ ಸಿಂಡರೋವ್​ಗಿಂತ ಅಲ್ಪ ಮುನ್ನಡೆ ಸಾಧಿಸಿದ್ದ ಪ್ರಜ್ಞಾನಂದ, ಬ್ಲಿಟ್ಜ್​ನಲ್ಲಿ ಒಂದು ಪಂದ್ಯ ಸೋತರೂ, ಒಟ್ಟಾರೆ 18ರಲ್ಲಿ 11.5 ಅಂಕ ಕಲೆಹಾಕಿದರು. ಒಟ್ಟಾರೆ ಜಿಸಿಟಿ ರ್‍ಯಾಂಕಿಂಗ್​ನಲ್ಲಿ ಪ್ರಜ್ಞಾನಂದ 2ನೇ ಸ್ಥಾನದಲ್ಲಿದ್ದಾರೆ. ಪ್ರಜ್ಞಾನಂದಗೆ ಜಿಸಿಟಿಯಲ್ಲಿ ಇದು ಮೊದಲ ರ್‍ಯಾಪಿಡ್‌-ಬ್ಲಿಟ್ಜ್​ ಪ್ರಶಸ್ತಿ ಗೆಲುವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net