ವಿರಾಜಪೇಟೆ: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ನಡೆಸಲಾಗುವ 14 ವರ್ಷದ ಒಳಗಿನ ಬಾಲಕರ ಕ್ರಿಕೆಟ್ ಪಂದ್ಯಾಟಕ್ಕೆ ಮಂಗಳೂರು ವಿಭಾಗದ ಪರ ವಿರಾಜಪೇಟೆ ಪ್ರಗತಿ ಆಂಗ್ಲ ಮಾದ್ಯಮ ಶಾಲೆಯ ಇಬ್ಬರು ಬಾಲಕರು ಆಯ್ಕೆಯಾಗಿದ್ದಾರೆ. ವಿರಾಜಪೇಟೆ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿ ಯಶಸ್ಸ್ ಮತ್ತು 7ನೇ ತರಗತಿ ವಿದ್ಯಾರ್ಥಿ ವೃತನ್ ಮಂಗಳೂರು ವಿಭಾಗಕ್ಕೆ ಆಯ್ಕೆಯಾದ್ದಾರೆ. ಈ ಹಿಂದೆ ಮೈಸೂರು ವಿಭಾಗ ಮಟ್ಟದ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಕ್ರಿಕೆಟ್ ಸಂಸ್ಥೆಯು ಆಯೋಜಿಸುವ ಪಂದ್ಯಾಟದಲ್ಲಿ ರಾಯಚೂರು ವಿಭಾಗ, ಮಂಗಳೂರು ವಿಭಾಗ, ಮೈಸೂರು ವಿಭಾಗ, ಶಿವಮೊಗ್ಗ ವಿಭಾಗ, ಧಾರವಾಡ ವಿಭಾಗ ಮತ್ತು ತುಮಕೂರು ವಿಭಾಗಗಳ ಮಧ್ಯೆ ಬಾಲಕರ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಕ್ರಿಕೆಟ್ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ ಕೀರ್ತಿ ತರಲಿ ಎಂದು ಶಾಲಾ ಆಡಳಿತ ಮಂಡಳಿ ಹಾಗೂ ಕ್ರೀಡಾಸಕ್ತರು ಶುಭ ಹಾರೈಸಿದ್ದಾರೆ.