'ಡ್ಯೂಡ್'​ ಒಂದು ಸಿಂಪಲ್​... ರಿಲೀಸ್​ಗೂ ಮೊದಲೇ ಚಿತ್ರದ ಕಥೆ ಬಿಟ್ಟುಕೊಟ್ರಾ 'ಡ್ರ್ಯಾಗನ್'? | Pradeep Ranganathan

ವಿಜಯವಾಣಿ (47)
Published on

ತಮಿಳುನಾಡು: ತಮಿಳಿನ ಸೂಪರ್​ಹಿಟ್​ ‘ಡ್ರ್ಯಾಗನ್’ ಚಿತ್ರದ ಮೂಲಕ ಯುವ ಪ್ರೇಕ್ಷಕರ ಮನ ಗೆದ್ದಿರುವ ಹಾಗೂ ಯಶಸ್ಸು ಕಂಡಿರುವ ನಟ ಪ್ರದೀಪ್​ ರಂಗನಾಥನ್ (Pradeep Ranganathan), ಇದೀಗ ಯುವಜನತೆ ಇಷ್ಟಪಡುವ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ತಮ್ಮ ಮುಂಬರುವ ‘ಡ್ಯೂಡ್’​ ಚಿತ್ರದ ಪ್ರಚಾರ ಕಾರ್ಯದಲ್ಲಿ ಸಖತ್ ಬಿಜಿಯಾಗಿರುವ ಪ್ರದೀಪ್​, ಸಿನಿಮಾದ ಒಂದು ಎಳೆಯನ್ನು ಬಿಟ್ಟುಕೊಟ್ಟಿರುವುದು ಇದೀಗ ಕುತೂಹಲಕಾರಿ ಸಂಗತಿ.

ಮುಂದಿನ ವಾರ ದೀಪಾವಳಿ ಹಬ್ಬವಿರುವ ಹಿನ್ನೆಲೆ ತಮಿಳು ಚಿತ್ರರಂಗದಿಂದ ಬಹುನಿರೀಕ್ಷಿತ ಸಿನಿಮಾಗಳೇ ತೆರೆಕಾಣಲು ಸಾಲುಗಟ್ಟಿ ನಿಂತಿವೆ. ಈ ಪೈಕಿ ಪ್ರದೀಪ್​ ನಟಿಸಿರುವ 'ಡ್ಯೂಡ್​' ಒಂದೆಡೆಯಾದರೆ, 'ಬಿಸಾನ್​' ಮತ್ತು ಇನ್ನೊಂದಿಷ್ಟು ಸಿನಿಮಾಗಳು ರಿಲೀಸ್ ಆಗಲಿವೆ. ಈ ಚಿತ್ರಗಳೊಂದಿಗೆ ಡ್ಯೂಡ್​ ಬಾಕ್ಸ್​ ಆಫೀಸ್​ನಲ್ಲಿ ಪೈಪೋಟಿ ನಡೆಸಬೇಕಿದೆ. ಇನ್ನು ತಮ್ಮ ಸಿನಿಮಾಗೆ ಸಂಬಂಧಿಸಿದಂತೆ ಮನಬಿಚ್ಚಿ ಮಾತನಾಡಿರುವ ಪ್ರದೀಪ್​, "ಈ ಸಿನಿಮಾ ತುಂಬ ವಿಶೇಷತೆ, ಹೆಚ್ಚು ಆ್ಯಕ್ಷನ್​ನಿಂದ ಕೂಡಿಲ್ಲ. ಬದಲಿಗೆ ಒಂದು ಸರಳ ಹಾಗೂ ಸಣ್ಣ ಕಥೆಯನ್ನು ಒಳಗೊಂಡ ಚಿತ್ರವಾಗಿದೆ. ಮನರಂಜನೆ, ಹಾಸ್ಯ ಮತ್ತು ಫೈಟಿಂಗ್​ ಸನ್ನಿವೇಶಗಳಿವೆ. ಟ್ರೇಲರ್​ಗಿಂತಲೂ ಸಿನಿಮಾ ಇನ್ನೊಂದು ಲೆವಲ್​ನಲ್ಲಿದೆ. ಒಂದೊಳ್ಳೆ ಹಾಗೂ ಗಟ್ಟಿಯಾದ ಸಂದೇಶ 'ಡ್ಯೂಡ್​'ನಲ್ಲಿದೆ" ಎಂದಿದ್ದಾರೆ.

"ಈ ಸಿನಿಮಾ ಮೂಲಕ ನಿರ್ದೇಶಕರು ಏನೋ ಒಂದು ವಿಷಯ ಹೇಳಲು ಹೊರಟ್ಟಿದ್ದಾರೆ. ನನ್ನ ಪ್ರಕಾರ, ಪ್ರಸ್ತುತ ಕಾಲಘಟ್ಟಕ್ಕೆ ಇದೊಂದು ಒಳ್ಳೆಯ ಸಂದೇಶ ಎಂದೇ ಹೇಳಬಹುದು. 'ಡ್ಯೂಡ್'​ ನಿಜಕ್ಕೂ ಒಂದು ಕೂಲ್​ ಪಾತ್ರ. ಇನ್ನೊಬ್ಬರ ಖುಷಿಯಲ್ಲಿ ತನ್ನ ಖುಷಿಯನ್ನು ಕಾಣುವವನೇ ಈ ಡ್ಯೂಡ್​" ಎಂದು ಪ್ರದೀಪ್ ಹೇಳಿದ್ದಾರೆ. ಒಟ್ಟಾರೆ 'ಡ್ರ್ಯಾಗನ್'​ ಮೂಲಕ ತಮಿಳು ಚಿತ್ರರಂಗದಲ್ಲಿ ತಮ್ಮ ಹೆಸರನ್ನು ಗಟ್ಟಿಯಾಗಿ ಸ್ಥಾಪಿಸಿಕೊಂಡಿರುವ ಪ್ರದೀಪ್​, ಈಗ ಮತ್ತೊಂದು ಸಿನಿಮಾ ಮೂಲಕ ಸೂಪರ್​ಹಿಟ್​ ನೋಡುವ ನಿರೀಕ್ಷೆಯಲ್ಲಿರುವುದು ಸ್ಪಷ್ಟ.

ಇದೇ ಅ.17ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ಎದುರುನೋಡುತ್ತಿರುವ ‘ಡ್ಯೂಡ್’ ಚಿತ್ರದಲ್ಲಿ ನಟ ಪ್ರದೀಪ್ ರಂಗನಾಥನ್ ಮತ್ತು ನಟಿ ಮಮಿತಾ ಬೈಜು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕೀರ್ತಿಶ್ವರನ್ ಅವರ ಚೊಚ್ಚಲ ನಿರ್ದೇಶನ ಇದಾಗಿದ್ದು, ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net