ಕೊಳಕ್ಕೆ ಹಾರಿದ್ದ ರಾಹುಲ್​; ಕಾಂಗ್ರೆಸ್​ ನಾಯಕರು ಮುಳುಗುವುದನ್ನು ಅಭ್ಯಾಸ ಮಾಡುತಿದ್ದಾರೆ ಎಂದು ಪ್ರಧಾನಿ ಮೋದಿ ವ್ಯಂಗ್ಯ | Rahul fishing event

Modi rahul
Published on

ಪಾಟ್ನಾ: ಇತ್ತೀಚೆಗೆ ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮೀನು ಹಿಡಿಯಲು (Rahul fishing event) ನೀರಿಗೆ ಇಳಿದಿದ್ದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಕುರಿತಾಗಿ ಶನಿವಾರ (ನ 8) ವ್ಯಂಗ್ಯವಾಡಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರು ಮುಳುಗುವುದನ್ನು ಅಭ್ಯಾಸ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಸೀತಾಮರ್ಹಿಯಲ್ಲಿ ನಡೆದ ಎನ್​ಡಿಎ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೊಡ್ಡ ನಾಯಕರೆನಿಸಿಕೊಂಡವರು ಕೂಡ ಮೀನುಗಳನ್ನು ನೋಡಲು ಇಲ್ಲಿಗೆ ಬರುತ್ತಿದ್ದಾರೆ. ಹಾಗೆಯೇ ಬಿಹಾರದ ಚುನಾವಣೆಯಲ್ಲಿ ನೀರಿನಲ್ಲಿ ಮುಳುಗುವುದನ್ನು ಅಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಿದರು.

ವಿಪಕ್ಷ ನಾಯಕರುಗಳು ತಮ್ಮ ಮಕ್ಕಳನ್ನು ಮುಖ್ಯಮಂತ್ರಿ, ಮಂತ್ರಿಗಳು, ಸಂಸದರು ಮತ್ತು ಶಾಸಕರನ್ನಾಗಿ ಮಾಡಲು ಇಚ್ಛೆ ಪಡುತ್ತಾರೆ, ಇತ್ತ ನಿಮ್ಮ ಮಕ್ಕಳಿಗೆ ಗೂಂಡಾಗಳನ್ನು ಮಾಡಲು ಬಯಸುತ್ತಾರೆ. ಬಿಹಾರ ಇದನ್ನು ಒಪ್ಪಿಕೊಳ್ಳುವುದಿಲ್ಲ. ರಾಜ್ಯದಲ್ಲಿ ಮತ್ತೆ ಪಿಸ್ತೂಲುಗಳು, ಕ್ರೌರ್ಯ, ಭ್ರಷ್ಟಾಚಾರ ಮತ್ತು ದ್ವೇಷದ ಆಳ್ವಿಕೆ ನಡೆಯದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆ ನೀಡಿದರು. ಆರ್‌ಜೆಡಿಯ ಪ್ರಚಾರ ಗೀತೆಗಳು ಮತ್ತು ಘೋಷಣೆಗಳನ್ನು ಕೇಳಿದರೆ ಜನ ನಡುಗುತ್ತಾರೆ. ಬಿಹಾರದ ಮಕ್ಕಳಿಗಾಗಿ ಆರ್‌ಜೆಡಿಯ ಕಲ್ಪನೆ ಏನು ಎನ್ನುವುದು ಆ ಪಕ್ಷದ ನಾಯಕರ ಚುನಾವಣಾ ಪ್ರಚಾರಂದಿದಲೇ ಸ್ಪಷ್ಟವಾಗುತ್ತಿದೆ. ಆರ್‌ಜೆಡಿ ಅಭ್ಯರ್ಥಿಯ ಸಮ್ಮುಖದಲ್ಲಿ ಚುನಾವಣಾ ಪ್ರಚಾರದ ವೇದಿಕೆಯ ಮೇಲೆ 10 ವರ್ಷದ ಬಾಲಕನೊಬ್ಬ ಪಿಸ್ತೂಲುಗಳು ಮತ್ತು ರಂಗದಾರಿ ಬಗ್ಗೆ ಮಾತನಾಡುತ್ತಿರುವ ವಿಡಿಯೋವನ್ನು ಮೋದಿ ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ಬಿಹಾರಕ್ಕೆ ಈಗ ಬೇಕಾಗಿರುವುದು ನವೋದ್ಯಮಗಳ ಕನಸುಗಾರರು ಎಂದ ಮೋದಿ, "ನಯಿ ಚಾಹಿಯೇ ಕಟ್ಟಾ ಸರ್ಕಾರ, ಫಿರ್ ಏಕ್ ಬಾರ್ ಎನ್ಡಿಎ ಸರ್ಕಾರ್ (ನಮಗೆ ಬಂದೂಕು ಹಿಡಿದ ಸರ್ಕಾರ ಬೇಡ, ಮತ್ತೊಮ್ಮೆ ಎನ್​​ಡಿಎ ಸರ್ಕಾರ) ಎಂಬ ಹೊಸ ಘೋಷಣೆಯನ್ನು ಈ ವೇಳೆ ಪರಿಚಯಿಸಿದರು. ಜಂಗಲ್ ರಾಜ್ ಎಂದರೆ ಕಟ್ಟಾ, ಕ್ರೂರ್ತ, ಕಟುಟ, ಕುಸಂಸ್ಕರ್ ಮತ್ತು ಭ್ರಷ್ಟಾಚಾರ. ವಿಪಕ್ಷದ ನಾಯಕರು ಕೆಟ್ಟ ಮೌಲ್ಯಗಳನ್ನು ಹೊಂದಿದ್ದು, ಅದೇ ರೀತಿಯ ಆಡಳಿತ ನೀಡಬೇಕು ಎಂಬ ಆಲೋಚನೆಯಲ್ಲಿದ್ದಾರೆ, ಈ ಹಿಂದೆ ಜಂಗಲ್​ ರಾಜ್​ ಆಳ್ವಿಕೆ ಬಂದ ತಕ್ಷಣ, ಬಿಹಾರದ ಪತನದ ಯುಗ ಪ್ರಾರಂಭವಾಯಿತು. ಆರ್‌ಜೆಡಿ ಬಿಹಾರದಲ್ಲಿ ಎಲ್ಲಾ ಅಭಿವೃದ್ಧಿಯನ್ನು ಕೊನೆಗೊಳಿಸಿತು. ಈಗ ಅವರಾಡುವ ಎಲ್ಲ ಅಭಿವೃದ್ಧಿಯ ಮಾತುಗಳು ಹಸಿ ಸುಳ್ಳು ಎಂದರು.

ನವೆಂಬರ್ 6 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಹೆಚ್ಚಾದ ಮತದಾನ ಪ್ರಮಾಣದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಪ್ರಧಾನಿ, ನೀವು ಮನೆಯಿಂದ ಹೊರಗೆ ಬಂದು ಮತದಾನ ಮಾಡುವ ಮೂಲಕ ಪ್ರತಿಪಕ್ಷಗಳಿಗೆ ದೊಡ್ಡ ಆಘಾತ ನೀಡಿದ್ದೀರಿ. ಅವರಿಗೆ ರಾತ್ರಿ ನಿದ್ದೆ ಬರುತ್ತಿಲ್ಲ ಎಂದರು.

ಏನಿದು ಘಟನೆ...

ಕೆಲ ದಿನಗಳ ಹಿಂದೆ ಬೇಗುಸರೈನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯ ಬಳಿಕ ಮೀನು ಹಿಡಿಯಲು ತೆರಳಿದ್ದ ರಾಹುಲ್​​, ಡಿಸಿಎಂ ಅಭ್ಯರ್ಥಿ ಸಹಾನಿ ಸೇರಿದಂತೆ ಇತರ ನಾಯಕರ ಜೊತೆಗೂಡಿ ದೋಣಿಯ ಮೂಲಕ ಕೊಳದ ಮಧ್ಯಕ್ಕೆ ಹೋಗಿ, ಅಲ್ಲಿಂದ ನೀರಿಗೆ ಹಾರಿದರು. ಈ ವೇಳೆ ಸ್ಥಳೀಯ ಮೀನುಗಾರರ ಗುಂಪು ಸಹ ಅಲ್ಲಿ ಹಾಜರಿತ್ತು. ಮೀನುಗಾರಿಕೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ರಾಹುಲ್​ ಗಾಂಧಿ, ಮೀನುಗಾರರ ಸಮಸ್ಯೆಗಳನ್ನು ಆಲಿಸಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net