

ಕಣ್ಣಂತೂ ಮುಚ್ಚಿರುವುದು, ನಾನಾರೆಂಬ ಅರಿವಿರದ ದ್ವಂದ್ವ -ಗೊಂದಲ, ಒತ್ತಡ - ಜಂಜಡವಿಲ್ಲದ ವಿಶ್ರಾಂತ ಮನಸ್ಥಿತಿಯಾಗಿದೆ. ನಾವು ನಮ್ಮ ಬದುಕಿನ ಮೂರನೇ ಒಂದು ಭಾಗವನ್ನು ನಿದ್ರೆ ಮಾಡುವುದರಲ್ಲೇ ಕಳೆಯುತ್ತೇವೆ. ಒಂದು ದಿನ ನಿದ್ರೆಗೆಟ್ಟರೆ ನಮ್ಮ ಆರೋಗ್ಯದಲ್ಲಿ ಏರುಪೇರಾಗುವುದು. ಹೀಗೆ ನಿರಂತರ ನಿದ್ರೆಗೆಡುವುದರಿಂದ ಅನೇಕ ಮನೋದೈಹಿಕ ಸಮಸ್ಯೆಗಳು ಅಂಟಿಕೊಳ್ಳುವುದಂತು ಖಂಡಿತ. ಹಾಗೆಯೇ ಸುಖನಿದ್ರಾವಂತರಿಗೆ ಅವರು ಹೊರಬರಲು ಇಷ್ಟಪಡುವ ಸಮಸ್ಯೆಗಳಿಗೆ ಪರಿಹಾರ ನಿದ್ರೆಯಲ್ಲೇ ದೊರೆಯುತ್ತದೆ.
ಸುಖನಿದ್ರೆಯಿಂದ ಆರೋಗ್ಯದಲ್ಲಿ ಧನಾತ್ಮಕ ಸುಧಾರಣೆಯಾಗುತ್ತದೆ. ಮುಖ್ಯವಾಗಿ ಆಯಾಸ ಪರಿಹಾರ ಹಾಗೂ ದೇಹವನ್ನು ಸರಿಪಡಿ ಸಲು ಮತ್ತು ಉತ್ಸಾಹಿಯಾಗಿ ಇನ್ನೊಂದು ದಿನಕ್ಕೆ ಸಿದ್ಧವಾಗುವಂತೆ ಮಾಡುತ್ತದೆ. ವ್ಯಕ್ತಿಯ ವಯಸ್ಸು ನಿದ್ರಾ ಅವಧಿಯ ಮೇಲೆ ಪ್ರಭಾವವನ್ನು ಬೀರುತ್ತದೆ. ಒಂದು ವರ್ಷದೊಳಗಿನ ಹಸುಗೂಸು ದಿನಕ್ಕೆ 20 ಗಂಟೆಗಳ ನಿದ್ರೆ ಮಾಡಿದರೆ, ವಯಸ್ಕರು ಆರೆಂಟು ಗಂಟೆಗಳು ಹಾಗೂ ಇಳಿವಯಸ್ಕರು ನಾಲ್ಕೈದು ಗಂಟೆಗಳು ಮಾತ್ರ ನಿದ್ರೆ ಮಾಡುತ್ತಾರೆ. ಒಂದೇ ಸಮ ಎಂಟರಿಂದ ಹತ್ತ್ತು ದಿನಗಳ ಕಾಲ ವ್ಯಕ್ತಿಯನ್ನು ನಿದ್ರೆ ಮಾಡಲು ಬಿಡದೇ ಹೋದರೆ ಈ ಅವಧಿಯ ಕೊನೆಗೆ ಆತ ಬುದ್ಧಿ ಸ್ಥಿಮಿತವನ್ನು ಕಳೆದುಕೊಳ್ಳಬಹುದು ಹಾಗೂ ಬುದ್ಧಿ ಭ್ರಮಣೆಗೆ ಒಳಗಾಗುವ ಸಾಧ್ಯತೆ ಹೆಚ್ಚೆಂದು ಪ್ರಯೋಗಗಳಿಂದ ಸಾಬೀತಾಗಿದೆ.
ಉತ್ತಮ ಗುಣಮಟ್ಟದ ನಿದ್ರೆ ಮತ್ತು ವಿಶ್ರಾಂತಿ ನಮ್ಮ ಮಾನಸಿಕ ಹಾಗೂ ದೈಹಿಕ ಯೋಗಕ್ಷೇಮಕ್ಕೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಉತ್ತಮ ನಿದ್ರೆ ನಮ್ಮ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಭಾವನಾತ್ಮಕ ಸ್ಥಿತಿ ಸ್ಥಾಪಕತ್ವ, ಆತಂಕ ಉದ್ವೇಗ, ಖಿನ್ನತೆ-ಭಿನ್ನತೆಯನ್ನು ನಿಭಾಯಿಸುತ್ತದೆ. ಧನಾತ್ಮಕ ಭಾವನೆ ಹೊಂದಲು ಸಹಾಯಕವಾಗಿದೆ. ಸಾಕಷ್ಟು ವಿಶ್ರಾಂತಿ ಪಡೆಯುವುದರಿಂದ ಒತ್ತಡ ಹೃದ್ರೋಗ ಮತ್ತು ಇತರ ಅನಾರೋಗ್ಯದ ಅವಧಿ ತಡೆಯಬಹುದು.
ಯೋಗ ನಿದ್ರೆ: ನಿದ್ರಾಹೀನತೆ ಯಿಂದಬಳಲುತ್ತಿರುವವರಿಗೆ ಸುಖನಿದ್ರೆ ಹೊಂದಲು ಯೋಗನಿದ್ರೆ ಸಹಕಾರಿಯಾ ಗಿದೆ. ರಾತ್ರಿನಿದ್ರೆಯ ಮೊದಲು ಕನಿಷ್ಠ ಎರಡೂವರೆ ಗಂಟೆಗಳ ಮೊದಲು ಆಹಾರ ಸೇವಿಸಿರಿ. ಮಲ ಮೂತ್ರಾದಿ ವಿಸರ್ಜನೆ, ಕೈಕಾಲು ಮುಖ ತೊಳೆದು ನಿಮ್ಮಿಷ್ಟ ದೇವರ ಪ್ರಾರ್ಥನೆ ಮಾಡಿರಿ. ಸುಖನಿದ್ರೆಯ ಸಂಕಲ್ಪ ಹಾಗೂ ದುಃಸ್ವಪ್ನ ಬಾರದಿರಲು ನಿದ್ರಾ ಪ್ರಾರ್ಥನೆಯನ್ನು ಪಠಿಸಿರಿ. ಅದೆಂದರೆ...
ರಾಮಂ ಸ್ಕಂಧಂ ಹನುಮಂತಂ ವೈನತೇಯಂ ವೃಕೋದರಂ|
ಶಯನೇಯಃ ಸ್ಮರೇನ್ನಿತ್ಯಂ ದುಃಸ್ವಪ್ನಂ ತಸ್ಯ ನಶ್ಯತಿ ||
ಶುಭ್ರ ಹಾಸಿಗೆ, ಪ್ರಶಾಂತ ವಾತಾವರಣ. ಎಲೆಕಾ್ಟ್ರನಿಕ್ಸ್ ಉಪಕರಣಗಳ ಜಂಜಡವಿರದ ಪೂರ್ವ ಅಥವಾ ಪಶ್ಚಿಮದ ಕಡೆ ತಲೆಯಿರುವಂತೆ ಆರಾಮವಾಗಿ ಮಲಗೋಣ. ್ಝ ಕಾಲುಗಳ ಅಂತರ ಒಂದರಿಂದ ಒಂದೂವರೆ ಅಡಿಗಳಷ್ಟಿರಲಿ ್ಝ ಕೈಗಳನ್ನು ತೊಡೆಯ ಸ್ವಲ್ಪ ಪಕ್ಕ ಆಕಾಶಕ್ಕೆ ಹಸ್ತ ಮುಖವಾಗಿರುವಂತೆ ಇಟ್ಟುಕೊಳ್ಳೋಣ ್ಝ ತೆಳುವಾದ ದಿಂಬಿರಲಿ. ಕುತ್ತಿಗೆಯನ್ನು ಎಡ, ಬಲ ನೇರ ಯಾವಕಡೆ ಇಟ್ಟಿಕೊಂಡರೆ ‘ಹಾಯ್’ ಎನಿಸುತ್ತದೆಯೋ ಆ ಕ್ರಮದಲ್ಲಿ ಇರಿಸಿಕೊಳ್ಳೋಣ. ್ಝರೀರದ ಯಾವುದೇ ಭಾಗದಲ್ಲಿ ಬಿಗಿತ, ಒತ್ತಡ ಸೆಳೆತಗಳಿಲ್ಲದೆ ಶವದಂತೆ, ಕೊರಡಿನಂತೆ ಹಾಯಾಗಿ ಚಲನೆಯಿಲ್ಲದೆ ವಿರಮಿಸಿ.