

ಅಮೆರಿಕಾ: ಟಾಲಿವುಡ್ನ ರೆಬೆಲ್ ಸ್ಟಾರ್, ಡಾರ್ಲಿಂಗ್ ಪ್ರಭಾಸ್ ಮತ್ತು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಕಾಂಬಿನೇಷ್ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ 'ಸಲಾರ್' ಚಿತ್ರದ ಬಗ್ಗೆ ಇದೀಗ ಹೊಸ ಅಪ್ಡೇಟ್ ಲಭಿಸಿದ್ದು, ಚಿತ್ರವು ಅಮೆರಿಕಾದಲ್ಲಿ ಆರ್ಆರ್ಆರ್ ಮಾಡಿದ್ದ ದಾಖಲೆಯನ್ನು ಬ್ರೇಕ್ ಮಾಡಲು ಸಜ್ಜಾಗಿದೆ.
ಸಲಾರ್ ಪಾರ್ಟ್ 1: ಸೀಸ್ ಫೈರ್ ಸಿನಿಮಾ ಇದೇ ಸೆಪ್ಟೆಂಬರ್ 28, 2023 ರಂದು ವಿಶ್ವದಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಸದ್ಯ ಚಿತ್ರವು ಯುಎಸ್ನಲ್ಲಿ ಬಿಡುಗಡೆಗೂ ಮುನ್ನವೇ ಹೊಸ ದಾಖಲೆ ನಿರ್ಮಿಸುವ ಮುಖೇನ ಭಾರೀ ಸದ್ದು ಮಾಡುತ್ತಿದೆ. ಅಮೆರಿಕದಾದ್ಯಂತ ಎಲ್ಲಾ ಸಿನಿಮಾರ್ಕ್ ಥಿಯೇಟರ್‌ಗಳಲ್ಲಿ ಚಿತ್ರವನ್ನು ಪ್ರದರ್ಶಿಸಲು ಸಕಲ ತಯಾರಿಗಳನ್ನು ಮಾಡಲಾಗಿದೆ ಎಂದು ಅಲ್ಲಿನ ವಿತರಕರು ಮಾಹಿತಿ ನೀಡಿದ್ದಾರೆ.
ಈ ಹಿಂದೆ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಚಿತ್ರವು, 285 ಸಿನಿಮಾರ್ಕ್ ಥಿಯೇಟರ್‌ಗಳಲ್ಲಿ ಪ್ರದರ್ಶನಗೊಂಡಿತ್ತು. ಇದೀಗ ಈ ದಾಖಲೆಯನ್ನು ಮುರಿದು ಮುನ್ನುಗ್ಗಲು ಸಲಾರ್ ತಯಾರಾಗಿದ್ದು, ಉತ್ತರ ಅಮೆರಿಕಾದ 1980ಕ್ಕೂ ಹೆಚ್ಚು ಭಾಗಗಳಲ್ಲಿ ಸಿನಿಮಾ ರಿಲೀಸ್ ಆಗಲು ಸಜ್ಜಾಗಿದೆ ಎಂದು ಇತ್ತೀಚಿನ ವರದಿ ತಿಳಿಸಿದೆ.
ಸಿನಿಮಾದಲ್ಲಿ ಡಾರ್ಲಿಂಗ್ ಪ್ರಭಾಸ್, ಶ್ರುತಿ ಹಾಸನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಪೃಥ್ವಿರಾಜ್ ಸುಕುಮಾರನ್, ಈಶ್ವರಿ ರಾವ್, ಜಗಪತಿ ಬಾಬು ಮುಂತಾದ ಪ್ರತಿಭಾವಂತ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ನಲ್ಲಿ ನಿರ್ಮಾಣಗೊಂಡ ಸಲಾರ್ಗೆ ರವಿ ಬಸ್ರೂರ್ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).