'ಸಲಾರ್'​ ಹೀರೋ ಕೈಯಲ್ಲಿವೆ ಎರಡು ಹೊಸ ಪ್ರಾಜೆಕ್ಟ್​ಗಳು!

Untitled design - 2023-09-30T173441.215
Published on

ಆಂಧ್ರಪ್ರದೇಶ: 'ಕೆಜಿಎಫ್' ಖ್ಯಾತಿಯ ಪ್ರಶಾಂತ್​ ನೀಲ್​ ನಿರ್ದೇಶನದ ಬಹುನಿರೀಕ್ಷಿತ 'ಸಲಾರ್'​ ಮೂಲಕ ಅಭಿಮಾನಿಗಳು ಮತ್ತು ಸಿನಿಪ್ರಿಯರನ್ನು ಮನರಂಜಿಸಲು ಸಜ್ಜಾಗಿರುವ ರೆಬೆಲ್​ ಸ್ಟಾರ್​, ಡಾರ್ಲಿಂಗ್​ ಪ್ರಭಾಸ್​ ಕೈಯಲ್ಲಿ ಇದೀಗ ಎರಡು ದೊಡ್ಡ ಪ್ರಾಜೆಕ್ಟ್​ಗಳು ಸೇರಿವೆ ಎಂದು ಸಿನಿ ವರದಿ ಮಾಹಿತಿ ನೀಡಿದೆ.

ಭಾರತೀಯ ಚಿತ್ರರಂಗದ ಸ್ಟಾರ್​ ನಟರ ಪೈಕಿ ಹೆಚ್ಚು ಖ್ಯಾತಿ ಗಳಿಸಿರುವ ನಟ ಪ್ರಭಾಸ್, ಜಾಗತಿಕವಾಗಿ ಸಹಸ್ರಾರು ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. 'ಬಾಹುಬಲಿ', 'ಸಾಹೋ' ನಂತರದಲ್ಲಿ 'ಸಲಾರ್'​ ಮುಖೇನ ತೆರೆ ಮೇಲೆ ಮಾಸ್​ ಲುಕ್​ನಲ್ಲಿ ಕಾಣಿಸಿಕೊಳ್ಳಲಿರುವ ಪ್ರಭಾಸ್, ಚಿತ್ರ ಬಿಡುಗಡೆಗೂ ಮುನ್ನವೇ ಎರಡು ದೊಡ್ಡ ಬ್ಯಾನರ್​ನ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಹೆಸರಾಂತ ನಿರ್ದೇಶಕರೊಂದಿಗೆ ಪ್ರಭಾಸ್​ ಕೈಜೋಡಿಸಿದ್ದು, ಎರಡು ಚಿತ್ರಗಳಿಗೆ ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರವೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂಬ ಸುದ್ದಿ ಇದೀಗ ಟಾಲಿವುಡ್​ ಅಂಗಳದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

ಇತ್ತೀಚೆಗಷ್ಟೇ 'ಸಲಾರ್' ಡಿಸೆಂಬರ್ 22 ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ​ ಬಿಡುಗಡೆಗೊಳ್ಳಲಿದೆ ಎಂದು ಹೊಂಬಾಳೆ ಫಿಲಂಸ್​ ಅಧಿಕೃತವಾಗಿ ಘೋಷಿಸಿದೆ. ಸದ್ಯ ಚಿತ್ರದ ಟ್ರೇಲರ್​ಗಾಗಿ ಪ್ರಭಾಸ್​ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net