ಇಬ್ಬರು ಸ್ಟಾರ್​ ನಿರ್ದೇಶಕರ ಚಿತ್ರಕ್ಕೆ ಪ್ರಭಾಸ್​ ನಾಯಕ! 'ಬಾಹುಬಲಿ' ಅರಸಿ ಬರುತ್ತಿವೆ ಬಿಗ್​ ಪ್ರಾಜೆಕ್ಟ್​ | Prabhas

Prabhas
Published on

ಆಂಧ್ರಪ್ರದೇಶ: ಪ್ಯಾನ್​ ಇಂಡಿಯಾ ಸ್ಟಾರ್​, ನಟ ಪ್ರಭಾಸ್​ ಸದ್ಯ ಟಾಲಿವುಡ್​ ಅಂಗಳದಲ್ಲಿ ಸಖತ್​ ಸದ್ದು ಮಾಡುತ್ತಿದ್ದು, ಸಾಲು ಸಾಲು ಸಿನಿಮಾಗಳ ಚಿತ್ರೀಕರಣದಲ್ಲಿ ಬಿಸಿಯಾಗಿದ್ದಾರೆ. ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಬಹುನಿರೀಕ್ಷಿತ ಸಿನಿಮಾಗಳ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿರುವ ಪ್ರಭಾಸ್ (Prabhas),​ ಸದ್ಯ ಮತ್ತೆರೆಡು ಬಿಗ್ ಬಜೆಟ್​ನ ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ.

ಪ್ರಸ್ತುತ 'ಕಣ್ಣಪ್ಪ', 'ದಿ ರಾಜಾ ಸಾಬ್', 'ಫೌಜಿ', 'ಸ್ಪಿರಿಟ್' ಚಿತ್ರಗಳಲ್ಲಿ ಅಭಿನಯಿಸುತ್ತಿರುವ ರೆಬೆಲ್ ಸ್ಟಾರ್, ಸಿನಿಮಾ ಜಗತ್ತಿನ ವಿಸ್ತಾರವನ್ನು ಪ್ರೇಕ್ಷಕರಿಗೆ ಪರಿಚಯಿಸಲು ಹೊರಟಿರುವ ಸ್ಟಾರ್​ ನಿರ್ದೇಶಕರಾದ ಲಿಯೋ ಖ್ಯಾತಿಯ ಲೋಕೇಶ್​ ಕಂಗಾರಾಜ್​ ಮತ್ತು ಪ್ರಶಾಂತ್​ ವರ್ಮ ಅವರ ಮುಂಬರುವ ದೊಡ್ಡ ಬಜೆಟ್​ನ ಸಿನಿಮಾಗೆ ನಾಯಕರಾಗಿ ಆಯ್ಕೆಯಾಗಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ತಮ್ಮದೇ ಹೆಸರು ಸ್ಥಾಪಿಸಿಕೊಂಡಿರುವ ಈ ಇಬ್ಬರು ನಿರ್ದೇಶಕರೊಂದಿಗೆ ಪ್ರಭಾಸ್​ ಕೈಜೋಡಿಸುತ್ತಿರುವ ವಿಷಯ ಇದೀಗ ಅವರ ಅಭಿಮಾನಿಗಳಲ್ಲಿ ಅತೀವ ಸಂತಸ ಮೂಡಿಸಿದೆ.

ಇದರೊಟ್ಟಿಗೆ ಬಾಲಿವುಡ್​ನ ಹೆಸರಾಂತ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಅವರ ಮುಂಬರುವ ಸಿನಿಮಾದಲ್ಲಿ ಪ್ರಭಾಸ್​ ಒಂದು ವಿಶೇಷ ಹಾಗೂ ಬಹುಮುಖ್ಯ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎಂಬ ಸುದ್ದಿಗಳು ಸದ್ಯ ಬಾಲಿವುಡ್​ ಅಂಗಳದಲ್ಲಿ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಇದೇನಾದರೂ ನಿಜವಾದರೆ, ಪ್ರಭಾಸ್​ ಕೀರ್ತಿ ಮತ್ತಷ್ಟು ಹೆಚ್ಚಲಿದ್ದು, ಜಾಗತಿಕ ಮಟ್ಟದಲ್ಲಿ ದೊಡ್ಡದಾಗಿ ಸೌಂಡ್ ಮಾಡುವುದು ಬಹುತೇಕ ಖಚಿತ ಎಂದೇ ಹೇಳಬಹುದು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net