ಸ್ಯಾನ್ ಡಿಯಾಗೋ ಕಾಮಿಕ್-ಕಾನ್​​ನಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಚಲನಚಿತ್ರ 'ಪ್ರಾಜೆಕ್ಟ್-ಕೆ'!

Untitled design - 2023-07-20T142809.249
Published on

ಆಂಧ್ರಪ್ರದೇಶ: ಟಾಲಿವುಡ್ ನಟ, ರೆಬಲ್​ ಸ್ಟಾರ್​ ಪ್ರಭಾಸ್-ನಾಗ್ ಅಶ್ವಿನ್ ಕಾಂಬಿನೇಷನ್​​ನಲ್ಲಿ ಮೂಡಿಬರುತ್ತಿರುವ ಸೈನ್ಸ್​-ಫಿಕ್ಷನ್​​, ಹೈ-ಬಜೆಟ್ ಚಿತ್ರ 'ಪ್ರಾಜೆಕ್ಟ್-ಕೆ' ಇದೀಗ ಭಾರೀ ಸುದ್ದಿಯಲ್ಲಿದೆ.

ಡಾರ್ಲಿಂಗ್​ ಪ್ರಭಾಸ್​ ಮತ್ತು ಬಾಲಿವುಡ್​​ ನಟಿ ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಪ್ರಾಜೆಕ್ಟ್​ ಕೆ' ಸಿನಿಮಾ ಈ ವರ್ಷ ಸ್ಯಾನ್ ಡಿಯಾಗೋ ಕಾಮಿಕ್-ಕಾನ್​​ನಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರತಂಡದ ಕಲಾವಿದರು, ನಿರ್ದೇಶಕರು ಮತ್ತು ಟೆಕ್ನಿಷಿಯನ್​​ಗಳ ತಂಡ ಈಗಾಗಲೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಾಜರಾಗಿದೆ. ಈ ನಡುವೆ ಕ್ಯಾಮರಾಗಳಿಗೆ ಪೋಸ್​ ನೀಡಿದ ಪ್ರಭಾಸ್​, ನೀಲಿ ಬಣ್ಣದ ಸೂಟ್‌ನಲ್ಲಿ ಸ್ಟೈಲಿಶ್ ಆಗಿ ಮಿಂಚಿದ್ದಾರೆ.

ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ವೈಜಯಂತಿ ಮೂವೀಸ್ ನಿರ್ಮಾಣದ ಈ ಸಿನಿಮಾ ಜನವರಿ 12, 2024 ರಂದು ತೆರೆಗೆ ಬರಲು ಸಜ್ಜಾಗಿದೆ. ಪ್ರಾಚೆಕ್ಟ್​ ಕೆ ಬಗ್ಗೆ ಪ್ರಭಾಸ್​ ಅಭಿಮಾನಿಗಳು ಭಾರೀ ನಿರೀಕ್ಷೆಯನ್ನು ಹೊಂದಿದ್ದು, ಚಿತ್ರ ಯಾವ ರೀತಿ ಕಮಾಲ್​ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net