'ಕಲ್ಕಿ 2898 AD' ರಿಲೀಸ್​ ಡೇಟ್​ ಗೊಂದಲಕ್ಕೆ ಬಿತ್ತು ತೆರೆ! ಈ ತಿಂಗಳಲ್ಲಿ ಬರಲಿದೆ ಪ್ರಭಾಸ್ ಸೈ-ಫೈ​ ಚಿತ್ರ

ವಿಜಯವಾಣಿ - 2024-01-09T085609.722
Published on

ಆಂಧ್ರಪ್ರದೇಶ: ಇತ್ತೀಚೆಗೆ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಬ್ಲಾಕ್​ಬಸ್ಟರ್ ಪ್ಯಾನ್ ಇಂಡಿಯಾ ಸಿನಿಮಾ 'ಸಲಾರ್'​ ಮೂಲಕ ಬಾಕ್ಸ್​ ಆಫೀಸ್​​ನಲ್ಲಿ ಧೂಳೆಬ್ಬಿಸಿದ ಪ್ರಭಾಸ್​, ಇದೀಗ ತಮ್ಮ ಮುಂದಿನ ಸೈನ್ಸ್-ಫಿಕ್ಷನ್​ ಆಧರಿತ ಕಥೆಯುಳ್ಳ​ 'ಕಲ್ಕಿ 2898 AD' ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಈ ಬಹುನಿರೀಕ್ಷಿತ ಸಿನಿಮಾದ ರಿಲೀಸ್ ಡೇಟ್​ನಲ್ಲಿ ಕಳೆದ ಹಲವು ತಿಂಗಳುಗಳಿಂದ ಭಾರೀ ಗೊಂದಲ ಸೃಷ್ಟಿಯಾಗಿತ್ತು. ಆದ್ರೆ, ಇದಕ್ಕೆ ಈಗ ತೆರೆ ಬಿದ್ದಿದೆ.

ನಾಗ್ ಅಶ್ವಿನ್ ನಿರ್ದೇಶಿಸಿದ, ಡಾರ್ಲಿಂಗ್​ ಪ್ರಭಾಸ್​ ನಟನೆಯ ಸಿನಿಮಾ ಕುರಿತಂತೆ ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರು ತೀವ್ರ ಕುತೂಹಲ ವ್ಯಕ್ತಪಡಿಸಿದ್ದು, ಸೈ-ಫೈ ಒಳಗೊಂಡ ಈ ಚಿತ್ರ ಹೇಗಿರಲಿದೆ ಎಂದು ನಿರೀಕ್ಷಿಸಿದ್ದಾರೆ. ಈ ಹಿಂದೆ ಜನವರಿ ಅಥವಾ ಏಪ್ರಿಲ್ ತಿಂಗಳಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂದು ಹೇಳಲಾಗಿತ್ತು. ಆದ್ರೆ, ಚಿತ್ರತಂಡ ಯೋಜಿಸಿರುವ ಪ್ರಕಾರ ಮೇ 9, 2024 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ.

ಸದ್ಯ ಈ ಕುರಿತಂತೆ ಚಿತ್ರತಂಡ ಇಲ್ಲಿಯವರೆಗೆ ಯಾವುದೇ ಅಧಿಕೃತ ಮಾಹಿತಿ ಘೋಷಿಸಿಲ್ಲ ಎಂಬುದು ಗಮನಾರ್ಹ. ಬಿಗ್ ಬಜೆಟ್, ಉತ್ತಮ ವಿಎಫ್‌ಎಕ್ಸ್ ಇರುವ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಪಶುಪತಿ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net