

Prabhas | ಜನಪ್ರಿಯ ರೆಬೆಲ್ ಸ್ಟಾರ್ ನಟ ಪ್ರಭಾಸ್ ತಮ್ಮ ಅದ್ಭುತ ನಟನೆ ಹಾಗೂ ಉತ್ತಮ ಸಾಹಸ ದೃಶ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಸಲಾರ್ ಮತ್ತು ಬಾಹುಬಲಿಯಂತಹ ಸಿನಿಮಾಗಳಲ್ಲಿ ನಟಿಸಿ ಜನರ ಮನಸ್ಸಿನಲ್ಲಿ ಅಚ್ಚಳಿಯದಂತಹ ತಮ್ಮ ನಟನೆಯ ಛಾಪು ಮೂಡಿಸಿದ್ದಾರೆ. ಆದಾಗ್ಯೂ ಅವರ ಮದುವೆಯ ಬಗ್ಗೆ ಚರ್ಚೆಗಳು ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಸದ್ದು ಮಾಡುತ್ತಿರುತ್ತವೆ. ಪ್ರಭಾಸ್ ಮದುವೆಯ ಬಗ್ಗೆ ಮತ್ತೊಂದು ಕ್ರೇಜಿ ಸುದ್ದಿ ಬೆಳಕಿಗೆ ಬಂದಿದ್ದು, ಇದೀಗ ಹೈದರಾಬಾದ್‌ನ ಪ್ರಮುಖ ಉದ್ಯಮಿಯೊಬ್ಬರ ಮಗಳ ಜೊತೆ ಅವರ ವಿವಾಹ ನಿಶ್ಚಯವಾಗಿದೆ ಎನ್ನಲಾಗ್ತಿದೆ.
45 ವರ್ಷ ವಯಸ್ಸಿನ ಪ್ರಭಾಸ್ ಟಾಲಿವುಡ್‌ನಲ್ಲಿ ಅತ್ಯಂತ ಬೇಡಿಕೆಯ ಬ್ಯಾಚುಲರ್ ನಟರಲ್ಲಿ ಒಬ್ಬರಾಗಿದ್ದು, ಆಗಾಗ ಅವರ ವಿವಾಹದ ಸುದ್ದಿ ಮಾತ್ರ ಸದ್ದು ಮಾಡುತ್ತಿರುತ್ತದೆ. ಹಾಗೂ ನಟಿ ಅನುಷ್ಕಾ ಶೆಟ್ಟಿ ಅವರೊಂದಿಗಿನ ಸಂಬಂಧದ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆದಿವೆ. ಪ್ರಭಾಸ್ ಮತ್ತು ಅನುಷ್ಕಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವರದಿಗಳು ಬಹಳ ದಿನಗಳಿಂದ ಕೇಳಿ ಬರುತ್ತಿದ್ದವು.
ಇದೀಗ ಅಭಿಮಾನಿಗಳಲ್ಲಿದ್ದ ಎಲ್ಲಾ ಗೊಂದಲಗಳಿಗೂ ಪ್ರಭಾಸ್ ಉತ್ತರ ಕೊಡುವ ಸಮಯ ಸನಿಹದಿಲ್ಲದೆ. ಪ್ರಭಾಸ್ ಶೀಘ್ರದಲ್ಲೇ ಮದುವೆ ಆಗಲು ಎಲ್ಲಾ ಸಿದ್ಧತೆಗಳು ಒಳಗೊಳಗೆ ಆರೊಂಭಗೊಂಡಿವೆ ಎನ್ನಲಾಗಿದೆ. ಕೃಷ್ಣಂ ರಾಜು ಅವರ ಪತ್ನಿ ಶ್ಯಾಮಲಾ ದೇವಿ ಅವರು ಪ್ರಭಾಸ್ ವಿವಾಹದ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಇಲ್ಲಿಯವರೆಗೆ ಈ ರಹಸ್ಯವನ್ನು ಗೌಪ್ಯವಾಗಿ ಕಾಪಾಡಲಾಗಿತ್ತು ಎಂದು ಹೇಳಲಾಗ್ತಿದೆ.
ಈ ಮಧ್ಯೆ ಪ್ರಭಾಸ್ ತಮ್ಮ ಸಿನಿಮಾ ಕೆಲಸಗಳಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. 'ಕಲ್ಕಿ' ಚಿತ್ರವನ್ನು ಪೂರ್ಣಗೊಳಿಸಿದ ನಂತರ ಅವರು ಪ್ರಸ್ತುತ 'ದಿ ರಾಜಾ ಸಾಬ್' ಮತ್ತು 'ಫೌಜಿ' ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಾದ ಬಳಿಕ ಸಂದೀಪ್ ರೆಡ್ಡಿ ನಿರ್ದೇಶನದ 'ಸ್ಪಿರಿಟ್' ಎಂಬ ಮತ್ತೊಂದು ಪ್ರಮುಖ ಚಿತ್ರದ ಚಿತ್ರೀಕರಣವನ್ನು ಆರಂಭಿಸಲಿದ್ದಾರೆ. ಯುಗಾದಿ ಹಬ್ಬದ ಉಡುಗೊರೆಯಾಗಿ ಚಿತ್ರದ ಸೀಕ್ವೆಲ್ ಬಿಡುಗಡೆಗೊಳಿಸಲು ತಯಾರಿ ಮಾಡಿಕೊಳ್ತಿದ್ದಾರೆ.