ಜಪಾನ್‌ನಲ್ಲಿ ಪ್ರಬಲ ಭೂಕಂಪ: ನಡುಕಕ್ಕೆ ನಲುಗಿದ ನಗರಗಳು, ಸೂಪರ್‌ಮಾರ್ಕೆಟ್ ವಸ್ತುಗಳು ಚೆಲ್ಲಾಪಿಲ್ಲಿ! | Japan earthquake

Earthquake in Japan
ಮುಂಜಾನೆಯೇ ಜಪಾನ್‌ನಲ್ಲಿ ಪ್ರಬಲ ಭೂಕಂಪ
Published on: 

Shizuoka earthquake: ಮಧ್ಯ ಜಪಾನ್‌ನಲ್ಲಿ ಭಾನುವಾರ ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದ್ದು, ಜನರಲ್ಲಿ ತೀವ್ರ ಆತಂಕ ಉಂಟುಮಾಡಿದೆ. ಭಾರಿ ನಡುಕಕ್ಕೆ ಕಟ್ಟಡಗಳು ಅಲ್ಲಾಡಿದ್ದು, ಘಟನೆಯಲ್ಲಿ ಸುಮಾರು 22ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಸೂಪರ್‌ಮಾರ್ಕೆಟ್‌ಗಳಲ್ಲಿ ವಸ್ತುಗಳು ನೆಲಕ್ಕೆ ಬಿದ್ದು ಚೆಲ್ಲಾಪಿಲ್ಲಿಯಾಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಈ ಪ್ರಬಲ ಭೂಕಂಪದ ಕೇಂದ್ರಬಿಂದು ಜಪಾನ್‌ನ ಶಿಝುವೊಕಾ ಪ್ರಿಫೆಕ್ಚರ್‌ನ ಪಶ್ಚಿಮ ಭಾಗದಲ್ಲಿ, ಭೂಮಿಯಿಂದ ಸುಮಾರು 40 ಕಿಲೋಮೀಟರ್ ಆಳದಲ್ಲಿ ಪತ್ತೆಯಾಗಿದೆ. ಇದರ ತೀವ್ರತೆ ಎಷ್ಟಿತ್ತೆಂದರೆ, ನೆರೆಯ ಐಚಿ ಪ್ರಿಫೆಕ್ಚರ್‌ನ ಚಿಟಾ ನಗರದಲ್ಲೂ ಅತ್ಯಂತ ಭೀಕರ ಕಂಪನ ದಾಖಲಾಗಿದೆ.

ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆ

ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆ ದಾಖಲಾಗಿರುವ ಈ ಭೂಕಂಪ, ಜಪಾನ್‌ನ ತೀವ್ರತೆಯ ಮಾಪನದಲ್ಲಿ 'ಅಪ್ಪರ್ 5' ರಷ್ಟು ಭೀಕರವಾಗಿತ್ತು. ನಡುಕ ಉಂಟಾಗುತ್ತಿದ್ದಂತೆ ಜನರು ಭಯದಿಂದ ಕಟ್ಟಡಗಳಿಂದ ಹೊರಗೆ ಓಡಲು ಯತ್ನಿಸಿದ್ದಾರೆ. ಈ ವೇಳೆ ಮೆಟ್ಟಿಲುಗಳಿಂದ ಬಿದ್ದು ಹಾಗೂ ಗಾಜಿನ ಚೂರುಗಳು ತಗುಲಿ 22ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ

ಇದನ್ನೂ ಓದಿ: ಅಯೋಧ್ಯೆಯಲ್ಲಿ ದೀಪಾವಳಿ ಸಡಗರ: ದೀಪೋತ್ಸವ ಮುಗಿದ ಮೇಲೆ ಅಲ್ಲಿ ನಡೆದಿದ್ದೇನು? | Ayodhya diyas oil collection

ಅಂಗಡಿಗಳಲ್ಲಿ ವಸ್ತುಗಳು ಚೆಲ್ಲಾಪಿಲ್ಲಿ

ಭೂಕಂಪದ ಜೋರಾದ ಧಕ್ಕೆಗೆ ಸೂಪರ್‌ಮಾರ್ಕೆಟ್ ಮತ್ತು ಮಳಿಗೆಗಳಲ್ಲಿದ್ದ ಸಾಮಗ್ರಿಗಳು ನೆಲಕ್ಕೆ ಬಿದ್ದು ಅಸ್ತವ್ಯಸ್ತಗೊಂಡಿವೆ. ಹಲವೆಡೆ ಅಂಗಡಿಗಳ ಮುಂಭಾಗದ ಗಾಜುಗಳು ಒಡೆದುಹೋಗಿವೆ. ಇನ್ನು ಮುನ್ನೆಚ್ಚರಿಕೆ ಕ್ರಮವಾಗಿ ಈ ಮಾರ್ಗದಲ್ಲಿ ಸಂಚರಿಸುವ ಬುಲೆಟ್ ರೈಲುಗಳ ವೇಗವನ್ನು ತಗ್ಗಿಸಲಾಗಿತ್ತು.