

Earthquake: ಟರ್ಕಿಯ ಕೊನ್ಯಾ ಭಾಗದದಲ್ಲಿ ಗುರುವಾರ 5.2 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದೆ. ಆದರೆ, ಯಾವುದೇ ಸಾವು ನೋವುಗಳಾಗಿಲ್ಲ ಎಂದು ವರದಿಯಾಗಿದೆ.
ಯುಕ್ರೇನ್ ಅಧ್ಯಕ್ಷ ಭೇಟಿ ನೀಡಿರುವ ಅಂಕಾರ ಪ್ರದೇಶದಲ್ಲಿ ಈ ಭೂಕಂಪನ ಸಂಭವಿಸಿದೆ ಎಂದು ವರದಿ ಉಲ್ಲೇಖಿಸಿದೆ.
ಟರ್ಕಿಯೆಯ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರ (AFAD) ಪ್ರಕಾರ, ಸ್ಥಳೀಯ ಸಮಯ ಮಧ್ಯಾಹ್ನದ ನಂತರ ಭೂಕಂಪನದ ಅನುಭವವಾಯಿತು. ಭೂಕಂಪನವು ಜನರಲ್ಲಿ ಭಯಭೀತತೆಯನ್ನು ಉಂಟುಮಾಡಿದೆ. ಅನೇಕ ನಿವಾಸಿಗಳು ತಮ್ಮ ಮನೆಗಳಿಂದ ಹೊರಗೆ ಓಡಿಹೋದರು. ಆದಾಗ್ಯೂ, ಇಲ್ಲಿಯವರೆಗೆ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಅಥವಾ ಯಾವುದೇ ಸಾವುನೋವು ಸಂಭವಿಸಿದ ವರದಿಯಾಗಿಲ್ಲ(ಏಜೆನ್ಸೀಸ್)