ರಾಜ್ಯದ ಜನರಿಗೆ ವಿದ್ಯುತ್ ಶಾಕ್​; ವಿದ್ಯುಚ್ಛಕ್ತಿ ದರ ಹೆಚ್ಚಿಸಿದ ಸರ್ಕಾರ

power
Published on

ಬೆಂಗಳೂರು: ಉಪಚುನಾವಣೆ ಮುಗಿಯುತ್ತಿದ್ದ ಬೆನ್ನಲ್ಲೇ ರಾಜ್ಯದ ಜನರಿಗೆ ವಿದ್ಯುತ್​ ದರ ಹೆಚ್ಚಳದ ಶಾಕ್​ ನೀಡಲಾಗಿದೆ. ಬೆಸ್ಕಾಂ ಸೇರಿ ರಾಜ್ಯದಲ್ಲಿನ ಇನ್ನಿತರ ವಿದ್ಯುತ್​ ಸರಬರಾಜು ಸಂಸ್ಥೆಗಳ ಬೇಡಿಕೆಯನ್ನು ಪುರಸ್ಕರಿಸಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್​ಸಿ), ಪ್ರತಿ ಯುನಿಟ್​ಗೆ ಅಂದಾಜು 40 ಪೈಸೆ ದರ ಹೆಚ್ಚಳ ಮಾಡಿದೆ.

ನೂತನ ದರವು ನ. 1ರ ನಂತರ ಬಳಕೆಯಾಗುವ ವಿದ್ಯುತ್​ಗೆ ಅನ್ವಯವಾಗುವಂತೆ ಆದೇಶಿಸಲಾಗಿದೆ. ಪ್ರತಿಬಾರಿ ಏಪ್ರಿಲ್​ ತಿಂಗಳಲ್ಲಿ ದರ ಪರಿಷ್ಕರಣೆ ಮಾಡಲಾಗುತ್ತದೆ. ಆದರೆ, ಈ ಬಾರಿ ಕರೊನಾ ಕಾರಣದಿಂದ ಅದು ಸಾಧ್ಯವಾಗಿಲ್ಲ. ಇದೀಗ ಕರೊನಾ ಸೋಂಕು ಕಡಿಮೆಯಾಗುತ್ತಿದ್ದು, ವಿದ್ಯುತ್​ ಸರಬರಾಜು ನಿಗಮಗಳ ಆಥಿರ್ಕ ಹೊರೆ ಹೆಚ್ಚುತ್ತಿರುವ ಕಾರಣ ದರ ಪರಿಷ್ಕರಿಸಲಾಗಿದೆ. ನೂತನ ದರ ಪರಿಷ್ಕರಣೆ ಮುಂದಿನ 5 ತಿಂಗಳಿಗೆ ಅನ್ವಯವಾಗಲಿದೆ.

ಅಂದರೆ 2021ರ ಮಾರ್ಚ್​ವರೆಗೆ ಹೆಚ್ಚುವರಿ ದರ ಪಾವತಿಸಬೇಕಿದೆ. ಆ ನಂತರ ಅಗತ್ಯವಿದ್ದರೆ, ಮತ್ತೊಮ್ಮೆ ವಿದ್ಯುತ್​ ದರ ಹೆಚ್ಚಿಸಬಹುದು ಅಥವಾ ಈ ಹಿಂದಿನ ದರವನ್ನು ಮುಂದುವರಿಸಬಹುದು. ಆ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರವನ್ನು ಕೆಇಆರ್​ಸಿ ತಿಳಿಸಿಲ್ಲ. ಆದರೆ, ಪ್ರಸ್ತುತ ದರ ಏರಿಕೆ ಮುಂದಿನ 5 ತಿಂಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net