

ಬೆಂಗಳೂರು:
ವಿದ್ಯುತ್ ಬೆಲೆ ಹೆಚ್ಚಳ ಮಾಡುವಂತೆ ಬೆಸ್ಕಾಂ ಸೇರಿದಂತೆ 5 ವಿದ್ಯುತ್ ಸರಬರಾಜು ಕಂಪನಿಗಳು ಪ್ರತಿ ಯುನಿಟ್‌ಗೆ 49 ಪೈಸೆಯಿಂದ 1.50 ರೂ ತನಕ ಹೆಚ್ಚಳ ಕೇಳಿ ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಮಂಡಳಿ(ಕೆಇಆರ್‌ಸಿ)ಗೆ ಪ್ರಸ್ತಾವನೆ ಸಲ್ಲಿಸಿವೆ.
ಅತಿ ಕಡಿಮೆ ಪ್ರತಿ ಯುನಿಟ್‌ಗೆ 49 ಪೈಸೆ ಹೆಚ್ಚಳವನ್ನು ಬೆಸ್ಕಾಂ ಕೇಳಿದ್ದರೆ, ಮೆಸ್ಕಾಂ 59 ಪೈಸೆ, ಜೆಸ್ಕಾಂ ಪ್ರತಿ ಯುನಿಟ್‌ಗೆ 1.50 ರೂ ಏರಿಕೆಯನ್ನು ಕೇಳಿದೆ. ಹೆಸ್ಕಾಂ, ಸೆಸ್ಕ್ ಕಂಪನಿಗಳು ಈ ಸಲ ಬಾರಿಹೆಚ್ಚಳವನ್ನು ನಿರೀಕ್ಷೆ ಮಾಡಿಲ್ಲ.
ೆಬ್ರವರಿ 2ನೇ ವಾರದಿಂದ ಸಾರ್ವಜನಿಕ ಅದಾಲತ್ ಸಭೆಗಳು ಪ್ರಾರಂಭವಾಗಲಿವೆ. ಕೆಇಆರ್‌ಸಿ ಅಧ್ಯಕ್ಷ ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಾರ್ವಜನಿಕ ಅದಾಲತ್‌ನಲ್ಲಿ ಸದಸ್ಯರಾದ ಎಂ.ಡಿ.ರವಿ ಅವರು ಭಾಗವಹಿಸಲಿದ್ದಾರೆ. ಶೀಘ್ರವೇ ಸಾರ್ವಜನಿಕ ಅದಾಲತ್ ಮಾಡಲು ಕೆಇಆರ್‌ಸಿ ದಿನಾಂಕ ನಿಗಧಿ ಮಾಡಲಿದೆ.
ಕಳೆದ ವರ್ಷ 75 ಪೈಸೆ ಏರಿಕೆ
ಎಸ್ಕಾಂಗಳು ಕಳೆದ ವರ್ಷ ಪ್ರತಿ ಯುನಿಟ್‌ಗೆ 1.50 ರಿಂದ 2 ರೂ ತನಕ ವಿದ್ಯುತ್ ದರ ಏರಿಕೆ ಕೇಳಿದ್ದವು. ಬೆಸ್ಕಾಂನಿಂದ ಪ್ರತಿ ಯುನಿಟ್‌ಗೆ 1.50 ರೂ ಏರಿಕೆ ಕೇಳಿದ್ದರೆ, ಈ ವರ್ಷ 49 ಪೈಸೆ ಮಾತ್ರ ಕೇಳಲಾಗಿದೆ.
ದರ ಮುಂದೂಡಿಕೆ ಸಾಧ್ಯತೆ
ಲೋಕಸಭೆ ಚುನಾವಣೆ ದಿನಾಂಕ ೋಷಣೆ ಆಗುವುದು ಬಾಕಿ ಇದೆ. ಒಂದು ವೇಳೆ ಚುನಾವಣೆಗೆ ದಿನಾಂಕ ನಿಗಧಿ ಮಾಡಿ ಚುನಾವಣಾ ಆಯೋಗ ಚುನಾವಣೆ ೋಷಣೆ ಮಾಡಿದರೆ, ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದನ್ನು ಜಾರಿಗೆ ಕೊಡಲು ಸಮಸ್ಯೆ ಎದುರಾಗಬಹುದು. ಚುನಾವಣೆ ಮುಗಿದ ಬಳಿಕವೇ ದರ ಪರಿಷ್ಕರಣೆ ಪ್ರಕಟಿಸಬೇಕಾಗುತ್ತದೆ ಎಂದು ಕೆಇಆರ್‌ಸಿ ಮೂಲಗಳು ತಿಳಿಸಿವೆ.