ವಿದ್ಯಾರ್ಥಿಗಳಿಗೆ ಹೆಚ್ಚಲಿದೆ ಒತ್ತಡ ಎಕ್ಸಾಂ ಮುಂದೂಡಿ

manavi
ಪದವಿಯ ಕೊನೆಯ ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು. ಯು.ಭೂಮಿಕಾ, ಬಿ.ಎಂ.ಪ್ರೀತಂ ಗೌಡ, ಎನ್.ಕೀರ್ತಿ ನಾಯ್ಕ, ಕಾವ್ಯಾ, ಕೆ.ಟಿ.ರಮೇಶ್ ಮುಂತಾದವರಿದ್ದರು.
Published on

ಶಿವಮೊಗ್ಗ: ಕುವೆಂಪು ವಿವಿ ಪದವಿಯ ಕೊನೆಯ ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ ಎನ್‌ಎಸ್‌ಯುಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಕುವೆಂಪು ವಿವಿ ಪರೀಕ್ಷಾಂಗ ಉಪ ಕುಲಸಚಿವ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.

ಕೊನೆಯ ಸೆಮಿಸ್ಟರ್ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿರುವುದು ಅವೈಜ್ಞಾನಿಕವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ವೇಳಾಪಟ್ಟಿ ಪ್ರಕಾರ ಆ.30ರಿಂದ ಸೆ.9ರವರೆಗೆ ಪರೀಕ್ಷೆಗಳು ನಡೆಯುತ್ತವೆ. ಕೇವಲ 10 ದಿನಗಳಲ್ಲಿ ಅಷ್ಟೂ ವಿಷಯಗಳಲ್ಲಿ ಸಿದ್ಧತೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಹಿಂದಿನ ಸೆಮಿಸ್ಟರ್‌ಗಳಲ್ಲಿ ಬಾಕಿ ಉಳಿಸಿಕೊಂಡಿರುವ ವಿಷಯಗಳನ್ನೂ ಬರೆಯಬೇಕಿರುವುದರಿಂದ ಸಮಸ್ಯೆಯಾಗುತ್ತದೆ.
ಇದರ ನಡುವೆ ಆ.14ರಿಂದ 26ರವರೆಗೆ ಪ್ರಾಯೋಗಿಕ ಪರೀಕ್ಷೆಗಳೂ ನಡೆಯಲಿವೆ. ಇದರಿಂದ ವಿದ್ಯಾರ್ಥಿಗಳಿಗೆ ಒತ್ತಡ ಉಂಟಾಗುತ್ತದೆ. ಹೀಗಾಗಿ ಕನಿಷ್ಠ 10 ದಿನಗಳವರೆಗೆ ಪರೀಕ್ಷೆ ಮುಂದೂಡಬೇಕು. ಪ್ರತಿ ವಿಷಯಕ್ಕೂ ಮೂರ‌್ನಾಲ್ಕು ದಿನ ಅಂತರವಿರಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ವಿದ್ಯಾರ್ಥಿಗಳಾದ ಬಿ.ಎಂ.ಪ್ರೀತಂ ಗೌಡ, ಎನ್.ಕೀರ್ತಿ ನಾಯ್ಕ, ಕೆ.ಟಿ.ರಮೇಶ್, ಯು.ಭೂಮಿಕಾ, ಕಾವ್ಯಾ, ಪುಷ್ಪರಾಜ್ ಮುಂತಾದವರು ಮನವಿ ಸಲ್ಲಿಸುವ ಸಂದರ್ಭದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net