ಸಿಗರೇಟ್​ ಚಟ ಬಿಡಲು ವ್ಯಕ್ತಿಯೊಬ್ಬ ಮಾಡಿದ್ದೆಂಥಾ ಕೆಲಸ; 26.4 ಮಿಲಿಯನ್ ವೀಕ್ಷಿಸಿದ Post Viral

Untitled design (19)
Published on

ಯಾವುದೇ ರೀತಿಯ ವ್ಯಸನವನ್ನು ಕೆಟ್ಟದಾಗಿ ಪರಿಗಣಿಸಲಾಗುತ್ತದೆ. ಏಕೆಂದರೆ ಅದು ಇನ್ನೊಂದು ರೀತಿಯಲ್ಲಿ ನಮ್ಮ ದೌರ್ಬಲ್ಯವಾಗುತ್ತದೆ. ಅನೇಕ ಬಾರಿ ಚಟವನ್ನು ಸುಲಭವಾಗಿ ಗುಣಪಡಿಸಬಹುದು ಆದರೆ ಧೂಮಪಾನ, ಮದ್ಯಪಾನ ಅಥವಾ ಚಹಾದ ಚಟದಿಂದ ಮುಕ್ತರಾಗುವುದು ಅತ್ಯಂತ ಕಷ್ಟಕರವಾದ ಕೆಲಸವೆಂದು ಪರಿಗಣಿಸಲಾಗಿದೆ. ವ್ಯಕ್ತಿಯೊಬ್ಬರು ತಮ್ಮ ಚಟವನ್ನು ಬಿಡಲು ಪ್ರಯತ್ನಿಸುತ್ತಿರುವ ಪೋಸ್ಟ್​ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​(Post Viral) ಆಗಿದೆ.

ಸಿಗರೇಟ್ ಸೇದುವ ಅಭ್ಯಾಸವನ್ನು ತೊರೆಯುವುದು ಸಾಕಷ್ಟು ಸವಾಲಿನ ಸಂಗತಿಯಾಗಿದೆ ಏಕೆಂದರೆ ಇದಕ್ಕೆ ಬಲವಾದ ಇಚ್ಛಾಶಕ್ತಿ ಬೇಕಾಗುತ್ತದೆ. ಕೆಲವೇ ಜನರು ಇದನ್ನು ಮಾಡಲು ಸಮರ್ಥರಾಗಿದ್ದಾರೆ. ಒಬ್ಬ ಟರ್ಕಿಶ್ ವ್ಯಕ್ತಿ ತನ್ನ ಸಿಗರೇಟಿನ ಚಟವನ್ನು ತೊಡೆದುಹಾಕಲು ತುಂಬಾ ಪ್ರಯತ್ನಿಸಿದ್ದಾನೆ. 11 ವರ್ಷಗಳ ಹಿಂದೆ ವ್ಯಕ್ತಿಯೊಬ್ಬ ಮಾಡಿರುವ ಪ್ರಯತ್ನದ ಫೋಟೋ ಸದ್ಯ ವೈರಲ್ ಆಗುತ್ತಿದೆ.

ವೈರಲ್​ ಪೋಸ್ಟ್​​ನಲ್ಲಿ ಇಬ್ರಾಹಿಂ ಯುಸೆಲ್ ಎಂಬುವರು ತನ್ನ 26 ವರ್ಷದ ಸಿಗರೇಟ್ ಚಟವನ್ನು ಬಿಡಲು ಒಂದು ವಿಶಿಷ್ಟ ವಿಧಾನವನ್ನು ಅಳವಡಿಸಿಕೊಂಡಿದ್ದಾನೆ. ಎನ್​ಡಿಟಿವಿಯ ವರದಿಯ ಪ್ರಕಾರ ಅವನು ತನ್ನ ತಲೆಯನ್ನು ಲೋಹದ ಪಂಜರದಲ್ಲಿ ಲಾಕ್ ಮಾಡಿದ್ದಾನೆ. ಆ ಫೋಟೋವನ್ನು ನೀವು ನೋಡಬಹುದು.

ಈ ದುಂಡಗಿನ ಪಂಜರವು ಅವನನ್ನು ಕುತ್ತಿಗೆಯಿಂದ ತಲೆಯವರೆಗೆ ಮುಚ್ಚಿತ್ತು ಮತ್ತು ಅದರೊಳಗೆ ಬಹಳ ಸೂಕ್ಷ್ಮವಾದ ಬಲೆ ಹೊಂದಿತ್ತು ಆದ್ದರಿಂದ ಅವನು ಬಯಸಿದ್ದರೂ ಸಹ ಸಿಗರೇಟ್ ಸೇದಲು ಸಾಧ್ಯವಿಲ್ಲ. ಆ ವ್ಯಕ್ತಿ ಪಂಜರದ ಕೀಲಿಗಳನ್ನು ತನ್ನ ಹೆಂಡತಿಗೆ ನೀಡಿದ್ದರಿಂದ ಅವಳು ಅದನ್ನು ನಿಭಾಯಿಸಬಹುದು. ಯಾವುದೇ ಬೆಲೆ ತೆತ್ತಾದರೂ ಧೂಮಪಾನವನ್ನು ತ್ಯಜಿಸಲು ಬಯಸಿದ್ದರಿಂದ ಅವರು ಇದನ್ನು ಮಾಡಿದರು. ಯುಸೆಲ್ ದಿನಕ್ಕೆ ಎರಡು ಪ್ಯಾಕ್ ಸಿಗರೇಟ್ ಸೇದುತ್ತಿದ್ದ ಎಂದು ಹೇಳಲಾಗಿದೆ. ಕಳೆದ ಎರಡು ದಶಕಗಳಲ್ಲಿ ಈ ಅಭ್ಯಾಸವನ್ನು ಬಿಡಲು ಹಲವಾರು ಬಾರಿ ಪ್ರಯತ್ನಿಸಿದ್ದರಂತೆ.

ಕೆಲವೊಮ್ಮೆ ಮಕ್ಕಳ ಜನ್ಮದಿನದಂದು ಮತ್ತು ಕೆಲವೊಮ್ಮೆ ಮದುವೆಯ ವಾರ್ಷಿಕೋತ್ಸವಗಳಲ್ಲಿ ಸಿಗರೇಟ್​ ಸೇದುವನ್ನು ಬಿಡುವುದಾಗಿ ತೀರ್ಮಾನ ಕೈಗೊಳ್ಳುತ್ತಿದ್ದನಾದರೂ ಪ್ರತಿ ಬಾರಿಯೂ ವಿಫಲವಾಗುತಿತ್ತು. ಸ್ವಲ್ಪ ಸಮಯದ ನಂತರ ಅವನು ಮತ್ತೆ ಸಿಗರೇಟ್ ಸೇದಲು ಪ್ರಾರಂಭಿಸುತ್ತಿದ್ದ. ಆದರೆ ಧೂಮಪಾನವನ್ನು ತ್ಯಜಿಸುವ ಈ ವಿಧಾನವು ಆಗಲೂ ಸಾಕಷ್ಟು ವೈರಲ್ ಆಗಿತ್ತು. ಆದರೆ ಇದರಿಂದ ಸಿಗರೇಟಿನ ಚಟದಿಂದ ಮುಕ್ತಿ ಸಿಕ್ಕಿತೋ ಇಲ್ಲವೋ ಎಂಬುದು ಗೊತ್ತಾಗಲಿಲ್ಲ. ಈ ಪೋಸ್ಟ್ ಅನ್ನು ಇಲ್ಲಿಯವರೆಗೆ 26.4 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net