ಫೇಸ್​ಬುಕ್ ಮರುನಾಮಕರಣ ಸಾಧ್ಯತೆ

City 8 Facebook
Published on

ನವದೆಹಲಿ: ಸಾಮಾಜಿಕ ಜಾಲತಾಣದ ದಿಗ್ಗಜ ಕಂಪನಿ ಫೇಸ್​ಬುಕ್ ತನ್ನ ಹೆಸರನ್ನು ಬದಲಾವಣೆ ಮಾಡಲು ಬಯಸಿದ್ದು, ಮುಂದಿನ ವಾರ ಅದಕ್ಕೆ ಮರುನಾಮಕರಣ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಫೇಸ್​ಬುಕ್​ನ ಸಿಇಒ ಮಾರ್ಕ್ ಜುಕರ್​ಬರ್ಗ್ ಕಂಪನಿಯ ಹೆಸರು ಬದಲಾವಣೆ ಮಾಡುವ ಕುರಿತು ಅಕ್ಟೋಬರ್ 28ರಂದು ನಡೆಯಲಿರುವ ವಾರ್ಷಿಕ ಸಭೆಯಲ್ಲಿ ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ. ಆದರೆ, ಹೊಸ ಹೆಸರು ಯಾವುದು ಎಂಬ ಸುಳಿವು ನೀಡಿಲ್ಲ. ಫೇಸ್​ಬುಕ್​ನ ವ್ಯವಹಾರ ಕುರಿತು ಅಮೆರಿಕದ ಆಡಳಿತ ಪರಿಶೀಲನೆ, ತಪಾಸಣೆಯನ್ನು ಹೆಚ್ಚಿಸಿರುವುದು ಕಂಪನಿಗೆ ತಲೆನೋವಾಗಿದೆ. ಹೀಗಾಗಿ ಹೆಸರು ಬದಲಾವಣೆ ಮಾಡಬೇಕು ಎಂಬ ಆಲೋಚನೆಯನ್ನು ಫೇಸ್​ಬುಕ್ ಮಾಡಿದೆ ಎನ್ನಲಾಗಿದೆ. ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರಕ್ರಿಯಿಸಿರುವ ಫೇಸ್​ಬುಕ್, ಊಹಾಪೋಹ ಮತ್ತು ವದಂತಿಗಳಿಗೆ ಉತ್ತರಿಸುವ ಪರಿಪಾಠ ನಮ್ಮಲ್ಲಿ ಇಲ್ಲ ಎಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net