ಹಳ್ಳ ಹಿಡಿಯುವತ್ತ ಪೋಷಣ್​ ಅಭಿಯಾನ?

ddpi office klr 1 (1)
Published on

ಮುಖ್ಯಾಂಶಗಳು

* ಅಜೀಂ ಪ್ರೇಮ್​ಜಿ ಫೌಂಡೇಶನ್ ಫಾರ್ ​ ಡೆವಲಪ್ಮೆಂಟ್​ ಸಂಸ್ಥೆಯ ಅಧ್ಯಯನ

* ತಂಡದಿಂದ 357 ಶಾಲೆಗಳಲ್ಲಿ ಪರಿಶೀಲನಾ ವರದಿ ಸಿದ್ಧತೆ

ಕಿರುವಾರ ಎಸ್​. ಸುದರ್ಶನ್​ ಕೋಲಾರ

ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪೋಷಣ್​ ಅಭಿಯಾನ ಯೋಜನೆ ಹಳ್ಳ ಹಿಡಿಯುವ ಆತಂಕ ಎದುರಾಗಿದೆ.

ರಾಜ್ಯದಲ್ಲಿ ಯೋಜನೆ ಜಾರಿಗೊಂಡು 3 ತಿಂಗಳು ಕಳೆದರೂ ರಾಜ್ಯದ 66 ಶಾಲೆಗಳಲ್ಲಿ ಮೊಟ್ಟೆ ವಿತರಣೆ ಮಾಡದಿರುವುದು ಬೆಳಕಿಗೆ ಬಂದಿದ್ದು, ಈ ಬೆನ್ನಲ್ಲೇ ಯೋಜನೆ ಕಾರ್ಯಗತಗೊಳಿಸುವಲ್ಲಿ ರ್ನಿಲಕ್ಷ$್ಯ ತೋರಿರುವ ಯೋಜನೆ ಅನುಷ್ಠಾಧಿಕಾರಿಗಳಿಗೆ ಶಿಕ್ಷಣ ಇಲಾಖೆ ನೋಟಿಸ್​ ನೀಡಿದೆ.

ಬೆಳಕಿಗೆ ಬಂದ್ದು ಹೇಗೆ?: ಸರ್ಕಾರಿ ಶಾಲೆ ಮಕ್ಕಳಿಗೆ ವಾರದಲ್ಲಿ 6 ದಿನ ಮೊಟ್ಟೆ ವಿತರಿಸುವ ಯೋಜನೆಗೆ ಸೆ.25ರಂದು ರಾಜ್ಯಾದ್ಯಂತ ಚಾಲನೆ ನೀಡಲಾಗಿತ್ತು. ಗುರಿ ತಲುಪಲು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ), ತಾ.ಪಂ ಸಹಾಯಕ ನಿರ್ದೇಶಕರು ಹಾಗೂ ಶಾಲಾ ಮುಖ್ಯಶಿಕ್ಷಕರಿಗೆ ಗುರಿ ನಿಗದಿಪಡಿಸಿ ನೀಡಿ, ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿತ್ತು. ಯೋಜನೆಯ ಪ್ರಗತಿ ಪರಿಶೀಲನೆಯನ್ನು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ವಹಿಸಲಾಗಿದೆ.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಯೋಜನೆಯ ಅನುಷ್ಠಾನದ ಬಗ್ಗೆ ಅಜೀಂ ಪ್ರೇಮ್​ಜಿ ಫೌಂಡೇಶನ್ ಫಾರ್ ಡೆವಲಪ್​ಮೆಂಟ್​ ಸಂಸ್ಥೆಯ ಪರಿಶೀಲನಾ ತಂಡವು ಶಾಲಾ ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ ರಾಜ್ಯಾದ್ಯಂತ 4 ವಿಭಾಗಗಳಲ್ಲಿ ತಂಡ ರಚನೆ ಮಾಡಿಕೊಂಡು ಒಟ್ಟು 357 ಶಾಲೆಗಳಿಗೆ ಭೇಟಿ ನೀಡಿ ಮೌಲ್ಯ ಮಾಪನ ನಡೆಸಿದೆ. ಅದರಲ್ಲಿ ಜಿಲ್ಲೆಯ ಎರಡ್ಮೂರು ತಾಲೂಕುಗಳಿಗೆ ಕೆಲ ಶಾಲೆಗಳಲ್ಲಿ ಮೊಟ್ಟೆ ವಿತರಣೆ ಮಾಡದೆ ಇರುವುದು ಪತ್ತೆಯಾಗಿದೆ.

357 ಶಾಲೆಗಳಲ್ಲಿ ಅಧ್ಯಯನ: ರಾಜ್ಯದಲ್ಲಿ ಅಧ್ಯಯನ ಕೈಗೊಂಡ ಒಟ್ಟು 357 ಶಾಲೆಗಳ ಪೈಕಿ 66 ಶಾಲೆಗಳಲ್ಲಿ ಮೊಟ್ಟೆ ವಿತರಣೆ ಮಾಡದಿರುವುದು ಕಂಡು ಬಂದಿದೆ. ಶೇ.30 ವಿದ್ಯಾರ್ಥಿಗಳು ಮೊಟ್ಟೆ ಸೇವನೆ ಮಾಡುವವರು ಇದ್ದರೂ ಇದುವರೆಗೂ ವಿತರಿಸಿಲ್ಲ. ಮೊಟ್ಟೆಯನ್ನು ಸ್ವೀಕರಿಸದೆ ಇರುವ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆಯಾಗಿ ಬಾಳೆಹಣ್ಣು ನೀಡಬೇಕು, ಆದರೆ ಕೇವಲ ಶೇಂಗಾ ಚಿಕ್ಕಿ ವಿತರಿಸಿರುವುದು ಕಂಡು ಬಂದಿದೆ. 40 ಗ್ರಾಂ. ತೂಕದ ಪ್ರಮಾಣದ ಚಿಕ್ಕಿ ಬದಲು, ಕೇವಲ 30ಗಾಂ ವಿತರಿಸಿರುವುದು ಶಿಕ್ಷಣ ಇಲಾಖೆಗೆ ಅಧ್ಯಯನ ತಂಡ ನೀಡಿರುವ ವರದಿಯಲ್ಲಿ ಉಲ್ಲೇಖವಾಗಿದೆ.

* ಖುದ್ದು ಶಾಲೆಗೆ ಭೇಟಿ ನೀಡಲು ನಿರ್ಲಕ್ಷ್ಯ

ಶಿಕ್ಷಣ ಇಲಾಖೆ ಆನ್​ಲೈನ್​ ಮೂಲಕ ಜಿಲ್ಲಾ ಹಾಗೂ ತಾಲೂಕು ಹಂತದ ಅನುಷ್ಠಾನಾಧಿಕಾರಿಗಳಿಗೆ ತರಬೇತಿ ನೀಡಿತ್ತು. ಆದರೂ ಕಾಲಮಿತಿಯೊಳಗೆ ಯಾವುದೇ ಮೊಟ್ಟೆ, ಬಾಳೆ ಹಣ್ಣು, ಚಿಕ್ಕಿ ವಿದ್ಯಾರ್ಥಿಗಳ ಕೈ ಸೇರಿಲ್ಲ. ಅಧಿಕಾರಿಗಳು ಯೋಜನೆಯ ಉದ್ದೇಶ ಈಡೇರಿಸುವಲ್ಲಿ ನಿರ್ಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಜತೆಗೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪಿಎಂ ಪೋಷಣ್​ ಸಹಾಯ ನಿರ್ದೇಶಕರು ಪ್ರತ್ಯೇಕ ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿಲ್ಲ. ಮೊಟ್ಟೆ ವಿತರಣೆ ಬಗ್ಗೆ ಖಚಿತಪಡಿಸಿರುವುದಿಲ್ಲ, ಇದರಲ್ಲಿ ಅಧಿಕಾರಿಗಳ ಬೇಜಾವಾಬ್ದಾರಿ ಎತ್ತಿ ತೋರಿಸುತ್ತದೆ ಎಂದು ವರದಿ ಸಲ್ಲಿಸಿದ್ದಾರೆ.

* ಶಿಸ್ತು ಕ್ರಮದ ಎಚ್ಚರಿಕೆ

ಕರ್ತವ್ಯ ರ್ನಿಲಕ್ಷ್ಯ ತೋರಿರುವ ಸಹಾಯಕ ನಿರ್ದೇಶಕರಿಗೆ ಹಾಗೂ ಬಿಇಒಗಳಿಗೆ ರಾಜ್ಯ ನಾಗರಿಕ ಸೇವಾ ನಿಯಮ 2021ರಡಿ ರಾಜ್ಯದಲ್ಲಿ 50 ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ 49 ತಾಲೂಕು ಪಂಚಾಯಿತಿ ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳಿಗೆ ನೋಟಿಸ್​ ನೀಡಿ, 7 ದಿನಗಳೊಳಗೆ ಸಮಜಾಯಿಷಿ ನೀಡಬೇಕು, ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ ಬುಧವಾರ ನೋಟಿಸ್​ ನೀಡಿ ಎಚ್ಚರಿಕೆ ನೀಡಿದ್ದಾರೆ.

* ಜಿಲ್ಲೆಯಲ್ಲಿ ಯಾರ್ಯಾರಿಗೆ ನೋಟಿಸ್​

ಜಿಲ್ಲೆಯ ಮಾಲೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್​.ಎಸ್​.ಚಂದ್ರಕಲಾ, ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಉಮಾ ಹಾಗೂ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಕೋಲಾರ ಸುಬ್ರಮಣಿ, ಮಾಲೂರು ಆನಂದ ಮೂರ್ತಿಗೆ ನೋಟಿಸ್​ ಜಾರಿಯಾಗಿದೆ.

ಕೋಟ್​...

ಮೊಟ್ಟೆ ಸರಬರಾಜು ಮಾಡುತ್ತಿರುವ ಅಜೀಂಪ್ರೇಮ್​ಜೀ ಅವರ ಸಂಸ್ಥೆಯ ತಂಡವು ಪರಿಶೀಲನೆಗೆ ಬಂದಾಗ ಕೆಂಬೋಡಿ ಶಾಲೆಯಲ್ಲಿ ಲೋಪ ಕಂಡು ಬಂದಿದೆ. ಮುಖ್ಯಶಿಕರು ಸಹ ಪರೀೆ ಒತ್ತಡದಲ್ಲಿದ್ದರು. ತಂಡ ಭೇಟಿಯ ನಂತರ ಸಭೆ ನಡೆಸಿ ಚಿಕ್ಕಿ, ಬಾಳೆ ಹಣ್ಣಿಗಿಂತ ಮೊಟ್ಟೆ ವಿತರಿಸಲು ಸೂಚಿಸಲಾಗಿದೆ.

- ಕೃಷ್ಣಮೂರ್ತಿ, ಡಿಡಿಪಿಐ, ಕೋಲಾರ

ಕೋಟ್​...

ಸರ್ಕಾರಗಳು ಜನಪರ ಯೋಜನೆ ಜಾರಿಗೆ ತರುವ ಬಗ್ಗೆ ಸರ್ಕಾರಿ ಇಲಾಖಾಧಿಕಾರಿಗಳು ಅರಿತುಕೊಳ್ಳಬೇಕು. ಆ ಮೂಲಕ ಅರ್ಹರಿಗೆ ಯೋಜನೆಯ ಪ್ರಯೋಜನ ತಲುಪಿಸಲು ಕ್ರಮಕೈಗೊಳ್ಳಬೇಕು. ಅದು ಬಿಟ್ಟು ರ್ನಿಲಕ್ಷ್ಯ ತೋರಿದರೆ ಏನು ಲಾಭ? ಇಲಾಖೆ ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಗೆ ಸೇರಿದ್ದರೆ ಸೌಲಭ್ಯಗಳಿಂದ ವಂಚಿಸುತ್ತಿದ್ದರಾ?.

- ಕೆ.ವೈ.ಗಣೇಶ್​ಗೌಡ, ಕೋಟಿಗಾನಹಳ್ಳಿ, ಗ್ರಾಪಂ ಮಾಜಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net