

ರೋಮ್: ಮಾರಕ ಕರೊನಾ ಭೀತಿಯಿಂದ ಇಟಲಿಯಾದ್ಯಂತ ತಾತ್ಕಾಲಿಕ ಬಂದ್ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಇಟಲಿಯ ಅಶ್ಲೀಲ ವಿಡಿಯೋ ವೆಬ್ಸೈಟ್ ಪೋರ್ನ್ಹಬ್ ಏಪ್ರಿಲ್ 3ರವರೆಗೆ ತನ್ನ ಪ್ರಿಮಿಯಮ್ ಸೇವೆಯನ್ನು ಉಚಿತವಾಗಿ ನೀಡಲು ತೀರ್ಮಾನಿಸಿದೆ.
ಈ ಸಂಬಂಧ ಗುರುವಾರ ಪತ್ರಿಕಾ ಪ್ರಕಟಣೆಯನ್ನು ವೆಬ್ಸೈಟ್ ಬಿಡುಗಡೆ ಮಾಡಿದೆ. ಕರೊನಾದಿಂದ ಉಂಟಾಗಿರುವ ಪರಿಣಾಮಕ್ಕೆ ಮಾಡೆಲ್ಹಬ್ ವೇದಿಕೆಯಿಂದ ಹಣದ ದೇಣಿಗೆ ನೀಡುವುದಾಗಿ ತಿಳಿಸಿದೆ.
ಫೋರ್ಜ್ ಇಟಾಲಿಯಾ ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಕರೊನಾ ಸಮಯದಲ್ಲಿ ಸಹಾಯ ಮಾಡಲು ಮಾಡೆಲ್ಹಬ್ ವೇದಿಕೆಯಿಂದ ಮಾರ್ಚ್ ತಿಂಗಳಿನಿಂದ ಏಪ್ರಿಲ್ವರೆಗಿನ ಶೇಕಡವಾರು ಆದಾಯವನ್ನು ದೇಣಿಗೆಯನ್ನಾಗಿ ನೀಡುವುದಾಗಿ ಪೋರ್ನ್ಹಬ್ ನಿರ್ಧರಿಸಿದೆ ಎಂದು ಘೋಷಿಸಿದೆ.
ಯಾವುದೇ ಕ್ರೆಡಿಟ್ ಕಾರ್ಡ್ಗಳನ್ನು ಬಳಸದೇ ಇಡೀ ತಿಂಗಳು ಪೋರ್ನ್ಹಬ್ ಪ್ರೀಮಿಯಮ್ ಸೇವೆಯನ್ನು ಬಳಸಬಹುದೆಂದು ಪೋರ್ನ್ಹಬ್ ಹೇಳಿದೆ.
2017ರಲ್ಲಿ ಪ್ರಾರಂಭವಾದ ಪೋರ್ನ್ಹಬ್ ಇಂದು ವಿಶ್ವದ ಅತಿದೊಡ್ಡ ವೆಬ್ಸೈಟ್ ಎನಿಸಿಕೊಂಡಿದೆ. ಕಳೆದ ವರ್ಷ ಈ ಸೈಟ್ ಅನ್ನು 40 ಸಾವಿರ ಕೋಟಿಗೂ ಹೆಚ್ಚು ಬಾರಿ ಉಪಯೋಗಿಸಲಾಗಿತ್ತು. ಪ್ರತಿನಿತ್ಯ 115 ಮಿಲಿಯನ್ಸ್ ಹೊಸ ಗ್ರಾಹಕರು ಈ ಸೈಟ್ ಭೇಟಿ ನೀಡುತ್ತಾರೆ.
ಪೋರ್ನ್ಹಬ್ಗಳ ಪ್ರಮುಖ 20 ರಾಷ್ಟ್ರಗಳಲ್ಲಿ ಇಟಲಿ 7ನೇ ಸ್ಥಾನದಲ್ಲಿದೆ. ಅಮೆರಿಕ, ಜಪಾನ್ ಮತ್ತು ಬ್ರಿಟನ್ ಮೊದಲ ಮೂರು ಸ್ಥಾನದಲ್ಲಿದೆ. (ಏಜೆನ್ಸೀಸ್)